ಕಾಸರಗೋಡು: ಜಿಲ್ಲೆಯ ಪರಿಶಿಷ್ಟ ವರ್ಗದ ಜನರಿಗಾಗಿ, ಜಿಲ್ಲಾ ಐಟಿ ಮಿಷನ್, ಪರಿಶಿಷ್ಟ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತದ ಸಹಯೋಗದಲ್ಲಿ ಅನುಷ್ಠಾನಗೊಳಿಸಿರುವ ಎಬಿಸಿಡಿ ಕ್ಯಾಂಪೇನ್ ಜ.21ರಂದು ಬಂದಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಗ್ರಾಮ ಪಂಚಾಯತಿಯ ಎಲ್ಲಾ ಪರಿಶಿಷ್ಟ ಜಾತಿ ವಿಭಾಗದವರಿಗೆ ಯೋಜನೆಯ ಮೂಲಕ 596 ಗ್ರಾಹಕರಿಗೆ ಮೂಲ ದಾಖಲೆಯಾದ ಚುನಾವಣಾ ಗುರುತಿನ ಚೀಟಿ, , ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್, ಆರೋಗ್ಯ ವಿಮೆ ಎಂಬಿವುಗಳನ್ನು ಒದಗಿಸಲಾಗುವುದು. ಪಂಚಾಯಿತಿ ಮಟ್ಟದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಯೋಜನೆಯು ಸುಗಮವಾಗಿ ನಡೆಯುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವುದು. ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಷಯ ಉದ್ಯಮಿಗಳ ನೇತೃತ್ವದಲ್ಲಿ ಸೇವೆಗಳನ್ನು ಒದಗಿಸಲಾಗಿದೆ. ನಾಗರಿಕ ಪೂರೈಕೆ ಇಲಾಖೆ, ಕಂದಾಯ ಇಲಾಖೆ, ಪೆÇಲೀಸ್ ಇಲಾಖೆ, ಇಲೆಕ್ಷನ್ ಐಡಿ ಇಲಾಖೆ ಹಾಗೂ ಲೀಡ್ ಬ್ಯಾಂಕ್ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕ್ಯಾಂಪೇನ್ ನಡೆಸಲಾಗುತ್ತಿದೆ.