ಬದಿಯಡ್ಕ: ಇತಿಹಾಸ ಪ್ರಸಿದ್ಧವಾದ ಎಡನೀರು ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಫೆಬ್ರವರಿ 13 ರಿಂದ 17 ವರೆಗೆ ನಡೆಯಲಿದೆ.
ಜಾತ್ರಾ ಮಹೋತ್ಸವದ ಯಶಸ್ವೀಗಾಗಿ ಊರ, ಪರವೂರ ಭಕ್ತಾದಿಗಳ ಸಭೆ ಜ. 21 ರಂದು ಸಂಜೆ 5 ಗಂಟೆಗೆ ಎಡನೀರು ಶ್ರೀ ಮಠದಲ್ಲಿ ಜರಗಲಿರುವುದಾಗಿ ಶ್ರೀಮಠದ ಪ್ರಕಟಣೆ ತಿಳಿಸಿದೆ.