HEALTH TIPS

ಕಜೆಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಫೆ.21ರಿಂದ

          ಬದಿಯಡ್ಕ: ಕುಂಬ್ಡಾಜೆಯ ಕಜಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನ: ಪ್ರತಿμÁ್ಠ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ.21ರಿಂದ 26ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

           ಇದರಂಗವಾಗಿ ಬ್ರಹ್ಮಕಲಶೋತ್ವ ಸಮಿತಿ ರಚನಾ ಸಭೆಯು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಗೋಪಾಲ ಭಟ್ ಉಪ್ಪಂಗಳ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಶ್ರೀ ಕ್ಷೇತ್ರದ ಪರಿಸರದಲ್ಲಿ ನಡೆಯಿತು.

           ಕಾರ್ಯಕ್ರಮವನ್ನು ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದೂ ಕೆಲಸಕ್ಕೂ ನಮ್ಮ ಅಧ್ಯಾತ್ಮಿಕ ಚೈತನ್ಯವೇ ನಮ್ಮ ಪ್ರೇರಣಶಕ್ತಿಯಾಗಿದೆ. ಇದರಿಂದಲೇ ಭಾರತಕ್ಕೆ ವಿಶ್ವದಲ್ಲಿ ಉನ್ನತ ಗೌರವ ಸ್ಥಾನ ಹೊಂದಲು ಕಾರಣವಾಗಿದೆ. ಧರ್ಮದ ಪಾಲನೆ ನಮ್ಮ ಮೂಲ ಉದ್ದೇಶವಾಗಿರಬೇಕು.  ಪ್ರತಿಯೊಬ್ಬರು ಅದರಲ್ಲಿ ತೊಡಗಿಸಿಕೊಳ್ಳಬೇಕು. ನಿರಂತರವಾಗಿ ನಮ್ಮ ಧರ್ಮ ಆಚರಣೆಯ ಮೂಲಕ ನಮ್ಮ ಹಿರಿಯರು ಹಾಕಿಕೊಟ್ಟಂತಹ ದಾರಿಯಲ್ಲಿ ಮುನ್ನಡೆಗೆ ಸಾಧ್ಯವಾಯಿತು ಎಂದರು. ಒಂದೇ ಚಿಂತನೆ ಒಂದೇ ಭಾವನೆಯಿಂದ ತೊಡಗಿಸಿಕೊಂಡರೆ ಎಲ್ಲವೂ ಯಶಸ್ವಿಯಾಗುವುದು ಎಂದರು.

           ಕಾರ್ಯಕ್ರಮದಲ್ಲಿ  ವಾಸುದೇವ ಭಟ್ ಉಪ್ಪಂಗಳ, ಸಂಜೀವ ಶೆಟ್ಟಿ ಮೊಟ್ಟೆಕುಂಜೆ ಮುಂತಾದವರು ಮಾತನಾಡಿದರು. ನ್ಯಾಯವಾದಿ ಎಂ.ನಾರಾಯಣ ಭಟ್ ಮವ್ವಾರು, ಕಿರಣ್ ಕುಣಿಕುಳ್ಳಾಯ ಉಬ್ರಂಗಳ, ಎಸ್.ಎನ್. ಮಯ್ಯ ಬದಿಯಡ್ಕ, ಸುಬ್ರಹ್ಮಣ್ಯ ಭಟ್ ತಲೇಕ, ಶ್ರೀನಿವಾಸ ಅಮ್ಮಣ್ಣಾಯ ಗೋಸಾಡ, ಆನಂದ ಮವ್ವಾರು, ಹರೀಶ ಗೋಸಾಡ ಮುಂತಾದವರು ಉಪಸ್ಥಿತರಿದ್ದರು.

             ಆರಂಭದಲ್ಲಿ ಅನ್ನಪೂರ್ಣ ಜೋಕೆಮೂಲೆ ಪ್ರಾರ್ಥನೆ ಹಾಡಿದರು. ಹರಿನಾರಾಯಣ ಶಿರಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಈ ತನಕದ ಜೀರ್ಣೋದ್ಧಾರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಭಟ್ ಸ್ವಾಗತಿಸಿದರು. ಉದಯ ನಾರಾಯಣ ಉಪ್ಪಂಗಳ ವಂದಿಸಿದರು.  ಸೂರ್ಯ ಭಟ್ ಮಾಲಿಗಮನೆ ಕಾರ್ಯಕ್ರಮ ನಿರೂಪಿಸಿದರು.

          ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ರಕ್ಷಾಕಾರಿಯಾಗಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ರಕ್ಷಾಕಾರಿಯಾಗಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಗೌರವಾಧ್ಯಕ್ಷರಾಗಿ ಭಸ್ಮಾಜೆ ಗೋಪಾಲಕೃಷ್ಣ ಭಟ್, ಮಹಾಬಲೇಶ್ವರ ಭಟ್ ಉಪ್ಪಂಗಳ, ಬಾಲಕೃಷ್ಣ ಭಟ್ ಕಜಮಲೆ ಹಾಗೂ 16 ಮಂದಿ ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಯಿತು.

           ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ. ವೇಣುಗೋಪಾಲ ಕಳೆಯತ್ತೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಹರಿನಾರಾಯಣ ಶಿರಂತಡ್ಕ ಹಾಗೂ ಕೋಶಾಕಾರಿಯಾಗಿ ಉದಯ ನಾರಾಯಣ ಭಟ್ ಉಪ್ಪಂಗಳ ಅವರು ಆಯ್ಕೆಯಾದರು. ಇತರ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries