ಕಾಸರಗೋಡು : ಅಯೋಧ್ಯೆಯಲ್ಲಿ ಜ.22 ರಂದು ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಂದು ಮಧ್ಯಾಹ್ನ 12 ಗಂಟೆಗೆ ಹೂವಿನ ಪೂಜೆ ನಡೆಯಲಿದೆ. ಸಂಜೆ ಸೂರ್ಯಾಸ್ತಮಾನದ ವೇಳೆ ದೀಪೋತ್ಸವ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವಂತೆ ತಿಳಿಸಲಾಗಿದೆ. ಹೂವಿನ ಪೂಜೆ ನೀಡಲಿಚ್ಛಿಸುವವರು ಮುಂಚಿತವಾಗಿ ನವೀನ್ ನಾಯ್ಕ್ (ಮೊ:8547030908) ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.