ತಿರುವನಂತಪುರಂ: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಹುಲ್ ಮಂಕೂತ್ತಿಲ್ ಅವರಿಗೆ ವಂಚಿಯೂರ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ರಾಹುಲ್‍ಗೆ ಜನವರಿ 22ರವರೆಗೆ ರಿಮಾಂಡ್ ನೀಡಲಾಗಿದೆ. ನಿನ್ನೆ ಬೆಳಗ್ಗೆ ಆತೂರಿನಲ್ಲಿರುವ ಅವರ ಮನೆಯಿಂದ ರಾಹುಲ್ ನನ್ನು ಪೋಲೀಸರು ಬಂಧಿಸಿದ್ದರು. ತಿರುವನಂತಪುರಂ ಜನರಲ್ ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ರಾಹುಲ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ರಾಹುಲ್ ಅವರಿಗೆ ರಿಮಾಂಡ್ ವಿಧಿಸಿದೆ.
ರಾಹುಲ್ ಅವರು ಆರೋಗ್ಯ ಸಮಸ್ಯೆಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದಾದ ಬಳಿಕ ರಾಹುಲ್ ಅವರನ್ನು ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಕೋರ್ಟ್ ಆದೇಶಿಸಿತು. ಕಸ್ಟಡಿಗೆ ತೆಗೆದುಕೊಳ್ಳುವ ಮೊದಲು ಆರೋಗ್ಯದ ಮಾಹಿತಿಯನ್ನು ನಿಖರವಾಗಿ ದಾಖಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಸೆಕ್ರೆಟರಿಯೇಟ್ ಮಾರ್ಚ್ ವೇಳೆ ನಡೆದ ಘರ್ಷಣೆಯಲ್ಲಿ ರಾಹುಲ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಈ ನಿಟ್ಟಿನಲ್ಲಿ ವೈದ್ಯಕೀಯ ಮಾಹಿತಿಯನ್ನು ಪರಿಶೀಲಿಸುವಂತೆ ನ್ಯಾಯಾಲಯ ಹೇಳಿದೆ.