ಎರ್ನಾಕುಳಂ: ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇರಳದಿಂದ 23 ಸನ್ಯಾಸಿಗಳು ಪ್ರಯಾಣ ಬೆಳೆಸಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಎರ್ನಾಕುಳಂ ಪಾವಕುಳಂ ಕಚೇರಿ ತಲುಪಿದ ನಂತರ ಸನ್ಯಾಸಿಗಳು ಅಯೋಧ್ಯೆಗೆ ತೆರಳಿದರು.
ಅಯೋಧ್ಯೆ ಶ್ರೀರಾಮಜನ್ಮ ಭೂಮಿ ಟ್ರಸ್ಟ್‍ನ ವಿಶೇಷ ಆಹ್ವಾನದ ಮೇರೆಗೆ ಸನ್ಯಾಸಿಗಳು ಅಯೋಧ್ಯೆಗೆ ತೆರಳಿರುವರು.
ಎರ್ನಾಕುಳಂ ಪಾವಕುಳಂನಲ್ಲಿರುವ ವಿ.ಎಚ್.ಪಿ. ರಾಜ್ಯ ಕಚೇರಿಯಿಂದ ವಿಶ್ವ ಹಿಂದೂ ಪರಿಷತ್ ಸನ್ಯಾಸಿಗಳಿಗೆ ಬೀಳ್ಕೊಡುಗೆ ನೀಡಲಾಯಿತು. ವಿಎಚ್ ಪಿ ದೇಗುಲ ಸಂಘಟನೆ ಕಾರ್ಯದರ್ಶಿ ಕೇಶವರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ಗಿರೀಶ್‍ಕುಮಾರ್, ಜಂಟಿ ಖಜಾಂಚಿ ಶ್ರೀಕುಮಾರ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವಿಎಚ್‍ಪಿ ಕಾರ್ಯಕರ್ತರು ಯಾತ್ರೆಗೆ ಶುಭ ಕೋರಿದರು.
ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದಂತೆ ಕೇರಳದಲ್ಲಿ ವಿಸ್ತಾರವಾದ ಸಮಾರಂಭಗಳನ್ನು ಸಹ ನಡೆಸಲಾಗುತ್ತದೆ. ಪ್ರಾಣ ಪ್ರತಿಷ್ಠೆಯ ದಿನದಂದು ಪದ್ಮನಾಭ ಸ್ವಾಮಿ ದೇವಸ್ಥಾನದಿಂದ ಪೂಜಿಸಿದ ಬೃಹತ್ ಬಿಲ್ಲನ್ನು ಭಗವಾನ್ ಶ್ರೀರಾಮನಿಗೆ ಅರ್ಪಿಸಲಾಗುತ್ತದೆ. ಪ್ರಾಣ ಪ್ರತಿಷ್ಠಾ ದಿನದಂದು ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.