ಕಾಸರಗೋಡು: ವಿದ್ಯಾನಗರ ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳಿಗಾಗಿ "ಚಿಯರ್ಸ್-24' ವ್ಯಕ್ತಿತ್ವ ವಿಕಸನ ತರಗತಿ ವಿದ್ಯಾನಗರ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಿತು.
ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ ಐಎಎಸ್ ಸಮಾರಂಭ ಉದ್ಘಾಟಿಸಿದರು. ಜಾನಪದ ಸಾಹಿತ್ಯ ಕಲಾವಿದ ಮತ್ತು ತರಬೇತುದಾರ ಜಯನ್ ಕಾಡಗಂ, ಖ್ಯಾತ ಜೇಸೀಸ್ ಅಂತರಾಷ್ಟ್ರೀಯ ತರಬೇತುದಾರ ಮತ್ತು ಲಯನ್ಸ್ ಹೆಚ್ಚುವರಿ ಕ್ಯಾಬಿನೆಟ್ ಕಾರ್ಯದರ್ಶಿ ವಿ ವೇಣುಗೋಪಾಲ್ ಶಿಬಿರ ನಡೆಸಿಕೊಟ್ಟರು.
ಕ್ಲಬ್ ಅಧ್ಯಕ್ಷ ಎಂ.ಎ.ನಾಸರ್ ಅಧ್ಯಕ್ಷತೆ ವಹಿಸಿದ್ದರು, ಐಪಿಪಿ ಪೆÇ್ರ.ಗೋಪಿನಾಥನ್, ಎಲ್‍ಇಒ ಸಂಯೋಜಕ ವಕೀಲ ವಿನೋದಕುಮಾರ್, ವಲಯ ಅಧ್ಯಕ್ಷ ಮಧುಸೂದನನ್ ಪಿ.ವಿ, ಎಲ್‍ಇಒ ಅಧ್ಯಕ್ಷ ನಿಹಾರ ಮಧು, ವಿನೋದ್ ಪಾಲೋತ್ ಉಪಸ್ಥಿತರಿದ್ದರು. ಹೆಚ್ಚುವರಿ ಕಾರ್ಯದರ್ಶಿ ಸುಕುಮಾರನ್ ನಾಯರ್ ಬಹುಮಾನ ವಿತರಿಸಿದರು.