HEALTH TIPS

ಜ್ಞಾನವಾಪಿ ಸಮೀಕ್ಷಾ ವರದಿ ಬಹಿರಂಗ: 24ರಂದು ನಿರ್ಧಾರ

            ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವರದಿಯನ್ನು ಬಹಿರಂಗಗೊಳಿಸುವ ಮತ್ತು ಪ್ರತಿಗಳನ್ನು ವಾದಿ- ಪ್ರತಿವಾದಿಗಳಿಗೆ ನೀಡುವ ಕುರಿತು ಇದೇ ತಿಂಗಳ 24ರಂದು ನಿರ್ಧರಿಸುವುದಾಗಿ ವಾರಾಣಸಿ ನ್ಯಾಯಾಲಯ ಶನಿವಾರ ಹೇಳಿದೆ.

           ವರದಿ ಬಹಿರಂಗಗೊಳಿಸುವುದನ್ನು ನಾಲ್ಕು ವಾರಗಳವರೆಗೆ ಮುಂದೂಡಬೇಕೆಂದು ಕೋರಿ ಎಎಸ್‌ಐ ಈಚೆಗೆ ಸಲ್ಲಿಸಿದ್ದ ಮನವಿಯನ್ನು ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ್‌ ಪುರಸ್ಕರಿಸಿದರು. ಬಳಿಕ ಈ ಆದೇಶ ನೀಡಿದರು.

            ಹಿಂದೂಗಳ ಮತ್ತು ಮುಸ್ಲಿಮರ ಪರ ವಕೀಲರು, ಎಎಸ್‌ಐ ವಕೀಲರು ನ್ಯಾಯಾಲಯದಲ್ಲಿ ಹಾಜರಿದ್ದರು.

              ವಾರಾಣಸಿಯಲ್ಲಿನ ತ್ವರಿತಗತಿ ನ್ಯಾಯಾಲಯದಲ್ಲಿರುವ ಅರ್ಜಿಯ ವಿಚಾರಣೆಯ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೋರ್ಟ್‌ ಹೇಳಿದೆ. ತ್ವರಿತಗತಿ ನ್ಯಾಯಾಲಯವು ಈ ತಿಂಗಳ 19ರಂದು ಅರ್ಜಿಯ ವಿಚಾರಣೆ ನಡೆಸಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries