ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 2024ನೇ ಜ.24ರ ವರೆಗೆ ಅರ್ಜಿ ಸಲ್ಲಿಸಬಹುದು.
ನ್ಯಾಕ್ ಶ್ರೇಯಾಂಕದಲ್ಲಿ ಎ ಗ್ರೇಡ್ ಪಡೆದಿರುವ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯವು ದೇಶದ ಉನ್ನತ ಶಿಕ್ಷಣದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದ್ದು, ವಿಶ್ವವಿದ್ಯಾಲಯದಲ್ಲಿ 26 ಪಿಜಿ ಕೋರ್ಸುಗಳಿವೆ. ಇದರಲ್ಲಿ ತಿರುವಲ್ಲಾ ಎಲ್‍ಎಲ್‍ಎಂ ಕ್ಯಾಂಪಸ್‍ನಲ್ಲಿ ಮತ್ತು ಇತರ ಕೋರ್ಸ್ ಕಾಸರಗೋಡು ಪೆರಿಯಾ ಕ್ಯಾಂಪಸ್‍ನಲ್ಲಿಯೂ ಕಾರ್ಯಾಚರಿಸುತ್ತಿದೆ.
ಎಂಎ ಅರ್ಥಶಾಸ್ತ್ರ ವಿಭಾಗದಲ್ಲಿ 40ಸೀಟುಗಳಿವೆ. ಎಂ.ಎ. ಇಂಗ್ಲಿಷ್ ಮತ್ತು ತುಲನಾತ್ಮಕ ಸಾಹಿತ್ಯ (40), ಎಂ.ಎ. ಭಾಷಾಶಾಸ್ತ್ರ ಮತ್ತು ಭಾಷಾ ತಂತ್ರಜ್ಞಾನ (40), ಎಂ.ಎ. ಹಿಂದಿ ಮತ್ತು ತುಲನಾತ್ಮಕ ಸಾಹಿತ್ಯ (40), ಎಂ.ಎ. ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ವಿಜ್ಞಾನ (40), ಎಂಎ ಮಲಯಾಳಂ (40), ಎಂ.ಎ. ಕನ್ನಡ (40), ಎಂ.ಎ. ಸಾರ್ವಜನಿಕ ಆಡಳಿತ ಮತ್ತು ನೀತಿ ಅಧ್ಯಯನಗಳು (40),ಎಂಎಸ್‍ಡಬ್ಲ್ಯೂ(40), ಎಂ.ಇಡಿ(40), ಎಂಎಸ್ಸಿ ಪ್ರಾಣಿಶಾಸ್ತ್ರ (30), ಎಂಎಸ್ಸಿಬಯೋಕೆಮಿಸ್ಟ್ರಿ (30), ಎಂಎಸ್ಸಿ ಕೆಮಿಸ್ಟ್ರಿ (30), ಒSಛಿ ಕಂಪ್ಯೂಟರ್ ಸೈನ್ಸ್ (30), ಒSಛಿ ಪರಿಸರ ವಿಜ್ಞಾನ (30) , ಒSಛಿ ಜೀನೋಮಿಕ್ ಸೈನ್ಸ್ (30), ಒSಛಿ ಭೂವಿಜ್ಞಾನ (30), ಒSಛಿ ಗಣಿತ (30), ಒSಛಿ ಸಸ್ಯಶಾಸ್ತ್ರ (30),ಎಂಎಸ್ಸಿ ಭೌತಶಾಸ್ತ್ರ (30), ಎಂಎಸ್ಸಿ ಯೋಗ ಥೆರಪಿ, ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್, ಎಂಬಿಎ - ಜನರಲ್ ಮ್ಯಾನೇಜ್ಮೆಂಟ್, ಎಂಬಿಎ - ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಿಇಯುಟಿ ಮೂಲಕ ಪ್ರವೇಶ:
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಪ್ರವೇಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಸಿಇಯುಟಿ) ದೇಶದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಎನ್‍ಟಿಎ) ಮೂಲಕ ನಡೆಸಲಾಗುತ್ತದೆ. ಜನವರಿ 24 ರಂದು ರಾತ್ರಿ 11.50 ರವರೆಗೆ ಠಿgಛಿueಣ.sಚಿmಚಿಡಿಣh.ಚಿಛಿ.iಟಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹತೆ ಸೇರಿದಂತೆ ಮಾಹಿತಿಯನ್ನು ಒಳಗೊಂಡಿರುವ ಮಾಹಿತಿ ಬುಲೆಟಿನ್ ಅನ್ನು ಸಹ ಇಲ್ಲಿ ಪಡೆಯಬಹುದು. ಶುಲ್ಕ ಪಾವತಿಸಲು ಜನವರಿ 25 ಕೊನೆ ದಿನಾಂಕವಾಗಿದ್ದು, ಜನವರಿ 27 ರಿಂದ 29 ರವರೆಗೆ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಅವಕಾಶವಿರುತ್ತದೆ. ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದ ಮಾಹಿತಿ ಮಾರ್ಚ್ 4 ರಂದು ಅಧಿಸೂಚನೆಯನ್ನು ಹೊರಡಿಸಲಾಗುವುದು. ಮಾರ್ಚ್ 7 ರಿಂದ ನೀವು ಪ್ರವೇಶ ಕಾರ್ಡ್ ಅನ್ನು ಡೌನ್‍ಲೋಡ್ ಮಾಡಬಹುದು. ಪರೀಕ್ಷೆಯು ಮಾರ್ಚ್ 11 ರಿಂದ 28 ರವರೆಗೆ ನಡೆಯಲಿದೆ. ಎನ್‍ಟಿಎ ವೆಬ್‍ಸೈಟ್: www.nta.ac.in ಹೆಲ್ಪ್ ಡೆಸ್ಕ್: 01140759000. ಇಮೇಲ್: ಛಿueಣ-ಠಿg@ಟಿಣಚಿ.ಚಿಛಿ.iಟಿ ವಿಶ್ವವಿದ್ಯಾಲಯದ ವೆಬ್‍ಸೈಟ್: www.cukerala.ac.in