HEALTH TIPS

25 ಕೋಟಿ ಜನ ಬಡತನದಿಂದ ಹೊರಕ್ಕೆ: ಸಂಸತ್ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣ

            ವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡುವ ಮೂಲಕ ಕೇಂದ್ರದ ಬಜೆಟ್ ಅಧಿವೇಶನ ಮತ್ತು ಈ ಸರ್ಕಾರದ ಕೊನೆಯ ಅಧಿವೇಶನಕ್ಕೆ ಚಾಲನೆ ಸಿಕ್ಕಿದೆ.

               ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ.

               ಈ ಬಜೆಟ್‌ನಲ್ಲಿ ದೊಡ್ಡ ಘೋಷಣೆಗಳು ಇರುವುದಿಲ್ಲ ಎಂದು ನಿರ್ಮಲಾ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ನೂತನ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಮಾಡಲಿದೆ.

ರಾಷ್ಟ್ರಪತಿ ಭಾಷಣದ ಮುಖ್ಯಾಂಶಗಳು

* ರಾಮಮಂದಿರದ ಶತಮಾನಗಳ ಕನಸು ಈಗ ನನಸಾಗಿದೆ

* ಗರೀಬಿ ಹಠಾವೋ ಘೋಷಣೆ ಕುರಿತಂತೆ ನಾವು ಹಲವು ದಶಕಗಳಿಂದ ಕೇಳುತ್ತಲೇ ಇದ್ದೇವೆ. ಆದರೆ, ನಮ್ಮ ಸರ್ಕಾರ 25 ಕೋಟಿ ಜನರನ್ನು ಬಹುಆಯಾಮದ ಬಡತನದಿಂದ ಹೊರತಂದಿದೆ.

* ಮಧ್ಯಂತರ ಬಜೆಟ್ ನಾರಿ ಶಕ್ತಿಯ ಹಬ್ಬವಾಗಿದೆ.

* ಡಿಬಿಟಿ ಮೂಲಕ ನಮ್ಮ ಸರ್ಕಾರವು ₹34 ಲಕ್ಷ ಕೋಟಿ ವರ್ಗಾವಣೆ ಮಾಡಿದೆ. ವ್ಯವಸ್ಥೆಯಿಂದ ಸುಮಾರು 2 ಕೋಟಿ ನಕಲಿ ಫಲಾನುಭವಿಗಳನ್ನು ತೆಗೆದುಹಾಕಲಾಗಿದ್ದು, ₹2.75 ಲಕ್ಷ ಕೋಟಿ ಉಳಿಸಲಾಗಿದೆ.

* ಖಾಸಗಿ ವಲಯದ ಸಾಮರ್ಥ್ಯದ ಬಗ್ಗೆ ನಮ್ಮ ಸರ್ಕಾರ ನಂಬಿಕ ಇಟ್ಟಿದೆ. ಸುಲಭವಾಗಿ ಉದ್ಯಮ ನಡೆಸುವ ವಾತಾವರಣ ಖಚಿತಪಡಿಸಿದ್ದೇವೆ.

* ಮೇಡ್ ಇನ್ ಇಂಡಿಯಾದ ಇನ್ನೊವೇಟಿವ್ ಏರ್‌ಕ್ರಾಫ್ಟ್ ಎಂಜಿನ್ ಬಗ್ಗೆ ದೇಶ ಹೆಮ್ಮೆಪಡುತ್ತಿದೆ.

* ನಮ್ಮ ಸರ್ಕಾರವು ದಿವಾಳಿಯತ್ತ ಹೋಗದಂತೆ ದೇಶಕ್ಕೆ ರಕ್ಷಣೆ ಕೊಟ್ಟಿದೆ.

* ಐಟಿಆರ್ ಸಲ್ಲಿಕೆ 3.15 ಕೋಟಿಯಿಂದ 8.15 ಕೋಟಿಗೆ ಹೆಚ್ಚಳವಾಗಿದೆ.

* ವಸಾಹತುಶಾಹಿ ಕಾಲದ ಕಾನೂನುಗಳನ್ನು ಹಿಂಪಡೆಯಲಾಗಿದೆ. ಈಗ ನ್ಯಾಯ ದೊರಕಿಸುವತ್ತ ದೃಷ್ಟಿ ನೆಟ್ಟಿದೆಯೇ ಹೊರತು ಶಿಕ್ಷೆಯತ್ತಲ್ಲ.

* ಹೊಸ ಸಮಸತ್ತಿನಲ್ಲಿ ಏಕ ಭಾರತ ಶ್ರೇಷ್ಠ ಭಾರತ ಪರಿಮಳ ಹರಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries