HEALTH TIPS

ಬಿಟ್‌ ಕಾಯಿನ್ ಹೆಸರಲ್ಲಿ ವಂಚನೆ: ₹26 ಲಕ್ಷ ಕಳೆದುಕೊಂಡ ಮಹಾರಾಷ್ಟ್ರದ ಮಹಿಳೆ

              ಥಾಣೆ: ಆನ್‌ಲೈನ್ ಮೂಲಕ ಬಿಟ್ ಕಾಯಿನ್‌ಗೆ ಹಣ ಹೂಡುವಂತೆ ಆಮಿಷ ಒಡ್ಡಿದ ವಂಚಕರ ಜಾಲಕ್ಕೆ ಸಿಲುಕಿ ಮಹಾರಾಷ್ಟ್ರದ ಮಹಿಳೆಯೊಬ್ಬರು ₹26.88 ಲಕ್ಷ ಕಳೆದುಕೊಂಡಿದ್ದಾರೆ.

             ವಂಚನೆಗೊಳಗಾದ 33 ವರ್ಷದ ಮಹಿಳೆ ದೂರು ನೀಡಿದ್ದು, ಕಪೂರ್‌ಬಾವ್ಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

               ಬಿಟ್‌ಕಾಯಿನ್ ಕುರಿತು ಪ್ರಕಟವಾಗಿದ್ದ ಜಾಹೀರಾತು ಒಂದರಲ್ಲಿ ಇದ್ದ ಫೋನ್‌ ಸಂಖ್ಯೆಗೆ ಕರೆ ಮಾಡಿದ ಮಹಿಳೆ, ಅವರ ಸಲಹೆಯಂತೆ ಕಳೆದ ಒಂದು ವರ್ಷದಲ್ಲಿ ₹26.88 ಲಕ್ಷ ಪಾವತಿಸಿದ್ದಾರೆ. ಆನ್‌ಲೈನ್‌ನಲ್ಲಿ ಇವರಿಗಾಗಿಯೇ ಪ್ರತ್ಯೇಕ ಲಾಗಿನ್ ನೀಡಲಾಗಿತ್ತು. ಹೂಡಿಕೆಯಿಂದ ಬಂದ ಹಣವನ್ನು ಮರಳಿ ಪಡೆಯಲು ಇದರಲ್ಲಿ ಅವಕಾಶ ಇರುವುದಾಗಿ ಹೇಳಿದ್ದರು ಎಂದು ದೂರಿನಲ್ಲಿ ಮಹಿಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

               'ಆದರೆ ಈ ಲಾಗಿನ್‌ ಬಳಸಿ ಹಣ ಪಡೆಯಲು ಪ್ರಯತ್ನಿಸಿದರೆ ಅಲ್ಲಿ ಸಮಸ್ಯೆ ಎದುರಾಯಿತು. ಯಾವುದೇ ಹಣ ನನಗೆ ಸಿಗಲಿಲ್ಲ' ಎಂದಿದ್ದಾರೆ.

              ಈ ಕುರಿತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries