ಕೊಚ್ಚಿ: ‘ನವ ಕೇರಳಕ್ಕೆ ನರೇಂದ್ರ ಮೋದಿ ಭರವಸೆ’ ಎಂಬ ಘೋಷಣೆಯೊಂದಿಗೆ ಕೆ. ಸುರೇಂದ್ರನ್ ನೇತೃತ್ವದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಆಯೋಜಿಸಿರುವ ಕೇರಳ ಪಾದಯಾತ್ರೆ ನ.27ರಂದು ಕಾಸರಗೋಡಿನಿಂದ ಆರಂಭವಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉದ್ಘಾಟಿಸುವರು.
ಪ್ರತಿ ಲೋಕಸಭಾ ಕ್ಷೇತ್ರದಿಂದ 25,000 ಕಾರ್ಯಕರ್ತರು ಪಾದಯಾತ್ರೆಯಲ್ಲಿರುತ್ತಾರೆ. ಫೆ.24ರಂದು ಕೇರಳದ ಎಲ್ಲ ಬೂತ್ ಗಳಲ್ಲಿ ಎನ್ ಡಿಎ ಬೂತ್ ಸಮಾವೇಶ ನಡೆಯಲಿದೆ. ಪ್ರಧಾನ ಮಂತ್ರಿ ಮನ್ ಕಿ ಬಾತ್ ಕಾರ್ಯಕ್ರಮದ ಜೊತೆಯಲ್ಲಿ ಬೂತ್ ಅಧಿವೇಶನಗಳು ನಡೆಯಲಿವೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಹೊಸ ಪಕ್ಷಗಳು ಸೇರ್ಪಡೆಯಾಗಲಿವೆ.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ವಿವಿಧ ಪಕ್ಷಗಳೊಂದಿಗೆ ಬಿಜೆಪಿ ಶೀಘ್ರದಲ್ಲೇ ದ್ವಿಪಕ್ಷೀಯ ಮಾತುಕತೆ ಆರಂಭಿಸಲಿದೆ. ಸೀಟು ಹಂಚಿಕೆ ಚರ್ಚೆಯೂ ನಡೆಯಲಿದೆ ಎಂದು ಸುರೇಂದ್ರನ್ ಮಾಹಿತಿ ನೀಡಿದ್ದಾರೆ.