ಕುಂಬಳೆ: ಕಾಸರಗೋಡು ವಿದ್ಯಾನಗರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 27ನೇ ವಾರ್ಷಿಕೋತ್ಸವವು ಭಾನುವಾರ ಕಾಸರಗೋಡು ಲಲಿತ ಕಲಾ ಸದನದಲ್ಲಿ ಜರಗಿತು. ಈ ಸಂದರ್ಭದಲ್ಲಿ ಅಪರಾಹ್ನ ವಿದ್ವಾನ್ ಪಾಲಕ್ಕಾಡ್ ರಾಮಪ್ರಸಾದ್ ಅವರಿಂದ ಪ್ರಧಾನ ಕಛೇರಿ ಜರಗಿತು. ವಯಲಿನ್‍ನಲ್ಲಿ ವಿದ್ವಾನ್ ಆಲಂಕೋಡು ವಿ.ಎಸ್.ಗೋಕುಲ್, ಮೃದಂಗದಲ್ಲಿ ವಿದ್ವಾನ್ ಪಾಲಕ್ಕಾಡ್ ಹರಿನಾರಾಯಣ, ಮೋರ್ಸಿಂಗ್‍ನಲ್ಲಿ ವಿದ್ವಾನ್ ಪಯ್ಯನ್ನೂರು ಗೋವಿಂದ ಪ್ರಸಾದ್, ತಂಬೂರದಲ್ಲಿ ಲಾವಣ್ಯ ಜೊತೆಗೂಡಿದರು. ವಿದ್ವಾನ್ ಬಿ.ಜಿ.ಈಶ್ವರ ಭಟ್ ನಿರೂಪಣೆಗೈದರು. ಸಂಗೀತ ಗುರುಗಳಾದ ಉಷಾ ಈಶ್ವರ ಭಟ್ ಸ್ವಾಗತಿಸಿದರು.