ಪೆರ್ಲ:ಪೆರ್ಲ ಸನಿಹದ ಉಕ್ಕಿನಡ್ಕ ಕಂಗಿಲ ಶ್ರೀ ಕೊರಗತನಿಯ ಸನ್ನಿಧಿಯಲ್ಲಿ ಮೂರನೇ ವಾರ್ಷಿಕೋತ್ಸವ ಅಂಗವಾಗಿ ಜೋಡು ಕೊರಗತನಿಯ, ಜೋಡು ಗುಳಿಗ ಹಾಗೂ ಕರಿಚಾಮುಂಡಿ ದೈವಗಳ ಕೋಲ ಜ. 27 ಹಾಗೂ 28ರಂದು ಜರುಗಲಿದೆ.
27ರಂದು ಮಧ್ಯಾಹ್ನ 3ಕ್ಕೆ ಜೋಡು ಗುಳಿಗ ಕೋಲ, ಸಂಜೆ 7ರಿಂದ ಕುಣಿತ ಭಜನೆ, ರಾತ್ರಿ 8.15ಕ್ಕೆ ಶ್ರೀ ಕರಿಚಾಮುಂಡಿ ದೈವದ ತೊಡಙಳ್, ಕರಿಚಾಮುಂಡಿ ದೈವದ ಕುಳಿಚ್ಚಾಟ, 9ರಿಂದ ಶ್ರೀಕೊರಗ ತನಿಯ ಜೋಡು ಕೋಲ ನಡೆಯುವುದು. 28ರಂದು ಬೆಳಗ್ಗೆ 10ಕ್ಕೆ ಶ್ರೀ ಕರಿಚಾಮುಂಡಿ ದೈವದ ಕೋಲ ನಡೆಯುವುದು.