ಕೊಚ್ಚಿ: ವಯನಾಡಿನ ಅರಣ್ಯದಿಂದ ಸೆರೆಹಿಡಿದಿರುವ 'ಪಂದಲ್ಲೂರು ಮಾಖ್ನಾ' (ಪಿ.ಎಂ-2) ಹೆಸರಿನ ಆನೆಯನ್ನು ಮರಳಿ ಕಾಡಿಗೆ ಬಿಡಬೇಕೆಂದು ಕೇರಳ ಹೈಕೋರ್ಟ್ ರಚಿಸಿರುವ ತಜ್ಞರ ಸಮಿತಿ ಸಲಹೆ ನೀಡಿದೆ.
ಕೊಚ್ಚಿ: ವಯನಾಡಿನ ಅರಣ್ಯದಿಂದ ಸೆರೆಹಿಡಿದಿರುವ 'ಪಂದಲ್ಲೂರು ಮಾಖ್ನಾ' (ಪಿ.ಎಂ-2) ಹೆಸರಿನ ಆನೆಯನ್ನು ಮರಳಿ ಕಾಡಿಗೆ ಬಿಡಬೇಕೆಂದು ಕೇರಳ ಹೈಕೋರ್ಟ್ ರಚಿಸಿರುವ ತಜ್ಞರ ಸಮಿತಿ ಸಲಹೆ ನೀಡಿದೆ.
ಆನೆ ತಜ್ಞರಾದ ಡಾ. ಪಿ.ಎಸ್. ಈಸಾ, ಡಾ. ಎಂ. ಆನಂದ ಕುಮಾರ್ ಮತ್ತಿತರರನ್ನೊಳಗೊಂಡ ಸಮಿತಿಯು ಈ ಶಿಫಾರಸು ಮಾಡಿದೆ.
ಆನೆಯ ಚಲನವಲನಗಳ ಮೇಲೆ ನಿಗಾ ವಹಿಸುವ ಸಲುವಾಗಿ ಅದಕ್ಕೆ ರೇಡಿಯೊ ಕಾಲರ್ ಅಳವಡಿಸಬೇಕು ಎಂದೂ ಸಮಿತಿ ಹೇಳಿದೆ.
ಕೇರಳ ಹೈಕೋರ್ಟ್‌ಗೆ ಈಚೆಗೆ ವರದಿ ಸಲ್ಲಿಸಿರುವ ಸಮಿತಿಯು ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸಿದೆ. ವಯನಾಡಿನ ಸುಲ್ತಾನ್ ಬತ್ತೇರಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಈ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯು ಅನಗತ್ಯ ಆತುರ ತೋರಿದೆ ಎಂದೂ ಹೇಳಿದೆ.
ಪಂದಲ್ಲೂರು ಪ್ರದೇಶದಲ್ಲಿ ಪಿ.ಎಂ-2 ಆನೆಯು ವ್ಯಕ್ತಿಯೊಬ್ಬರನ್ನು ಕೊಂದಿದೆ ಎಂದು ತಮಿಳುನಾಡಿನ ಅರಣ್ಯ ಇಲಾಖೆಯು ಹೇಳಿತ್ತು.
ಈ ಆನೆಯನ್ನು ಸೆರೆ ಹಿಡಿದಿದ್ದ ತಮಿಳುನಾಡಿನ ಅರಣ್ಯ ಇಲಾಖೆಯು ಬಳಿಕ ಮುದುಮಲೈ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬಿಟ್ಟಿತ್ತು. ಬಳಿಕ ಇದು ವಯನಾಡಿಗೆ ಬಂದಿತ್ತು.