ಕಾಸರಗೋಡು: ಕೇಂದ್ರೀಯ ವಿದ್ಯಾಲಯ ನಂ.2ರಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಶಿಕ್ಷಕರ ನೇಮಕಾತಿಗಾಗಿ ಸಂದರ್ಶನ ಫೆಬ್ರವರಿ 2 ಮತ್ತು 3 ರಂದು ನಡೆಯಲಿದೆ. ಫೆಬ್ರವರಿ 2 ರಂದು ಬೆಳಿಗ್ಗೆ 9.30 ರಿಂದ 11 ರವರೆಗೆ ಪಿಜಿಟಿ (ಗಣಿತ, ಹಿಂದಿ, ವಾಣಿಜ್ಯ), ಟಿಜಿಟಿ (ವಿಜ್ಞಾನ, ಸಮಾಜ ವಿಜ್ಞಾನ) ಮತ್ತು ಶಿಶುವಿಹಾರ ಶಿಕ್ಷಕರ ನೇಮಕಾತಿಗೆ ಸಂದರ್ಶನ ನಡೆಯುವುದು.
ಪೆ. 3ರಂದು ರಂದು ಬೆಳಿಗ್ಗೆ 9.30 ರಿಂದ 11 ರವರೆಗೆ ಪ್ರಾಥಮಿಕ ಶಿಕ್ಷಕರು, ಕಲಾ ಶಿಕ್ಷಕರು, ಸಂಗೀತ ಶಿಕ್ಷಕರು, ಕಂಪ್ಯೂಟರ್ ಬೋಧಕರು, ಯೋಗ ಬೋಧಕರು, ಸಲಹೆಗಾರರು, ಸಿಬ್ಬಂದಿ ನರ್ಸ್, ವೈದ್ಯರು, ವಿಶೇಷ ಶಿಕ್ಷಕರು, ಮಲಯಾಳಂ ಭಾಷಾ ಶಿಕ್ಷಕರ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಮೂಲ ಪ್ರಮಾಣಪತ್ರ ಮತ್ತು ಅದರ ಸ್ವಯಂ ದೃಢೀಕರಿಸಿದ ಪ್ರತಿ ಮತ್ತು ಪಾಸ್‍ಪೆÇೀರ್ಟ್ ಅಳತೆಯ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ವೆಬ್‍ಸೈಟ್ https://no2kasragod.kvs.ac.in/ ದೂರವಾಣಿ 04994 295788, 04994 256788.