ನವದೆಹಲಿ: ಚೀನಾದ ಪ್ರಜೆಗಳಿಗೆ ವೀಸಾ ಕೊಡಿಸಿದ್ದ ಪ್ರಕರಣದಲ್ಲಿನ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಶುಕ್ರವಾರ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾದರು. ಇ.ಡಿ ಅಧಿಕಾರಿಗಳು ಅವರ ಹೇಳಿಕೆಯನ್ನು ದಾಖಲಿಸಿಕೊಂಡರು.

ಈ ಪ್ರಕರಣ ಸಂಬಂಧ ಒಂದು ತಿಂಗಳೊಳಗೆ ಕಾರ್ತಿ ಚಿದಂಬರಂ ಅವರು ಮೂರನೇ ಬಾರಿಗೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ. ಕಾರ್ತಿ ಅವರು 2023ರ ಡಿಸೆಂಬರ್ 23 ಮತ್ತು ಜನವರಿ 2ರಂದು ಇ.ಡಿ ಎದುರು ವಿಚಾರಣೆಗೆ ಹಾಜರಾಗಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಲ್ಲಿ (ಪಿಎಂಎಲ್‌ಎ) ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದರು.
₹50 ಲಕ್ಷ ಲಂಚ ಪಡೆದು ಚೀನಾದ 263 ಮಂದಿಗೆ 2011ರಲ್ಲಿ ವೀಸಾ ಕೊಡಿಸಿದ್ದರು ಎಂಬ ಆರೋಪವನ್ನು ಕಾರ್ತಿ ಮೇಲೆ ಹೊರಿಸಲಾಗಿದೆ. ಪಂಜಾಬ್‌ನಲ್ಲಿ ಸ್ಥಾಪನೆಯಾಗಿದ್ದ 'ವೇದಾಂತ್ ಗ್ರೂಪ್ ಕಂಪನಿ ತಾಲವಂಡಿ ಸಾಬೋ ಪಾವರ್ ಲಿಮಿಟೆಡ್'ನ ವಿದ್ಯುತ್ ಯೋಜನೆಯೊಂದರಲ್ಲಿ ಚೀನೀಯರು ಕೆಲಸ ಮಾಡಬೇಕಾಗಿತ್ತು. ಅವರ ಪರವಾಗಿ ಕಂಪನಿಯ ಅಧಿಕಾರಿಗಳು ಕಾರ್ತಿಗೆ ಹಣ ಸಂದಾಯ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ. ಕಾರ್ತಿ ಅವರ ತಂದೆ ಪಿ.ಚಿದಂಬರಂ ಅವರು ಆಗ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದರು. ಸಿಬಿಐ ತನಿಖೆ ನಡೆಸುತ್ತಿರುವ ಈ ಪ್ರಕರಣದಲ್ಲಿನ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ ತನಿಖೆ ನಡೆಸುತ್ತಿದೆ.