ರಾಂಚಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯೊಂದಿಗೆ ತನ್ನ ಕನಸು ನನಸಾದ ನಂತರ ಜಾರ್ಖಂಡ್‌ನ 85 ವರ್ಷದ ಮಹಿಳೆಯೊಬ್ಬರು ಮೂರು ದಶಕಗಳ ಸುದೀರ್ಘ 'ಮೌನ ವ್ರತ' ವನ್ನು ಮುರಿಯಲಿದ್ದಾರೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನವೇ ಮೌನವ್ರತ ಆರಂಭಿಸಿದ್ದ ಸರಸ್ವತಿ ದೇವಿ, ರಾಮಮಂದಿರ ಉದ್ಘಾಟನೆ ವೇಳೆ ಅದನ್ನು ಮುರಿಯುವುದಾಗಿ ಭರವಸೆ ನೀಡಿದ್ದರು ಎಂದು ಅವರ ಕುಟುಂಬದವರು ಹೇಳಿಕೊಂಡಿದ್ದಾರೆ.
ಧನ್ಬಾದ್ ನಿವಾಸಿ ಸೋಮವಾರ ರಾತ್ರಿ ದೇವಸ್ಥಾನದ ಉದ್ಘಾಟನೆ ವೀಕ್ಷಿಸಲು ರೈಲಿನಲ್ಲಿ ಅಯೋಧ್ಯೆಗೆ ತೆರಳಿದರು. 'ಮೌನಿ ಮಾತಾ' ಎಂದು ಹೆಸರಾಗಿರುವ ದೇವಿ, ಸಂಜ್ಞೆ ಭಾಷೆಯ ಮೂಲಕ ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸುತ್ತಿದ್ದರು ಆದರೆ ಸಂಕೀರ್ಣವಾದ ವಾಕ್ಯಗಳನ್ನು ಬರೆಯುತ್ತಿದ್ದರು ಎನ್ನಲಾಗಿದೆ.
2020 ರವರೆಗೆ ಅವರು 'ಮೌನವ್ರತ'ದಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಪ್ರತಿದಿನ ಮಧ್ಯಾಹ್ನ ಒಂದು ಗಂಟೆ ಮಾತನಾಡಿದರೂ, ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯಕ್ಕೆ ಅಡಿಪಾಯ ಹಾಕಿದ ದಿನ ಅವರು ಸಂಪೂರ್ಣವಾಗಿ ಮೌನವಾಗಿದ್ದರು.
ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು 55 ವರ್ಷದ ಕಿರಿಯ ಮಗ ಹರೇ ರಾಮ್ ಅಗರ್ ವಾಲ್, "ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸವಾದ ದಿನ, ನನ್ನ ತಾಯಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಾಗುವವರೆಗೆ ಮೌನವ್ರತ ಆಚರಿಸುವುದಾಗಿ ಪ್ರತಿಜ್ಞೆ ಮಾಡಿದರು. ದೇವಾಲಯದ ಶಂಕುಸ್ಥಾಪನೆಯ ದಿನಾಂಕ ಘೋಷಿಸಿದಾಗಿನಿಂದ ಅವರು ಸಂತಸಗೊಂಡಿರುವುದಾಗಿ ತಿಳಿಸಿದರು.
ಸರಸ್ವತಿ ದೇವಿ ಸೋಮವಾರ ರಾತ್ರಿ ಧನ್‌ಬಾದ್ ರೈಲು ನಿಲ್ದಾಣದಿಂದ ಗಂಗಾ-ಸಟ್ಲೆಜ್ ಎಕ್ಸ್‌ಪ್ರೆಸ್‌ನಲ್ಲಿ ಅಯೋಧ್ಯೆಗೆ ತೆರಳಿದ್ದು, ಜನವರಿ 22 ರಂದು ಅವರು ತಮ್ಮ ಮೌನವನ್ನು ಮುರಿಯಲಿದ್ದಾರೆ" ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಶಿಷ್ಯರು ದೇವಿಯನ್ನು ಆಹ್ವಾನಿಸಿದ್ದಾರೆ ಎಂದು ಎಂದು ಬಗ್ಮಾರಾ ಬ್ಲಾಕ್‌ನ ಭೌರಾ ನಿವಾಸಿ ಹರೇ ರಾಮ್ ಹೇಳಿದರು.
ನಾಲ್ಕು ಹೆಣ್ಣುಮಕ್ಕಳು ಸೇರಿದಂತೆ ಎಂಟು ಮಕ್ಕಳ ತಾಯಿಯಾದ ದೇವಿ 1986 ರಲ್ಲಿ ತನ್ನ ಪತಿ ದೇವಕಿನಂದನ್ ಅಗರ್ವಾಲ್ ಅವರ ಮರಣದ ನಂತರ ರಾಮನಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟಳು, ತನ್ನ ಹೆಚ್ಚಿನ ಸಮಯವನ್ನು ತೀರ್ಥಯಾತ್ರೆಗಳಲ್ಲಿ ಕಳೆಯುತ್ತಿದ್ದಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.