ತಿರುವನಂತಪುರಂ: ಕೆಎಸ್‍ಆರ್‍ಟಿಸಿಗೆ ರಾಜ್ಯ ಸರ್ಕಾರ ಮತ್ತೆ 30 ಕೋಟಿ ರೂ. ಅನುಮತಿಸಿದೆ. ಈ ಬಗ್ಗೆ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು 121 ಕೋಟಿ ರೂ.ನೀಡಲಾಗಿತ್ತು. ಸರ್ಕಾರದಿಂದ ಒಂಬತ್ತು ತಿಂಗಳಲ್ಲಿ 1,380 ಕೋಟಿ ರೂ.ಗಳನ್ನು ಪಾಲಿಕೆಗೆ ನೀಡಲಾಗಿದೆ.ಈ ವರ್ಷದ ಬಜೆಟ್‍ನಲ್ಲಿ 900 ಕೋಟಿ ರೂ.ಮೀಸಲಿಡಲಾಗಿತ್ತು.
ಕೆಎಸ್‍ಆರ್‍ಟಿಸಿಗೆ ಈಗಿನ ಸರ್ಕಾರ 5084 ಕೋಟಿ ರೂ., ಹಿಂದಿನ ಸರ್ಕಾರ 4936 ಕೋಟಿ ರೂ.ನೀಡಿದೆ. ಸಚಿವ ಕೆ.ಎನ್.ಬಾಲಗೋಪಾಲ್ ಮಾತನಾಡಿ, ಏಳೂವರೆ ವರ್ಷದಲ್ಲಿ ಎರಡೂ ಸರ್ಕಾರಗಳು 10,020 ಕೋಟಿ ರೂ.ನೀಡಿದೆಯೆಂದು ತಿಳಿಸಿರುವರು.