ಎರ್ನಾಕುಳಂ: ಬೊಕ್ಕಸದಲ್ಲಿ ಹಣ ಇಲ್ಲದಿದ್ದರೂ ಬಹುತೇಕ ವಿಫಲವಾಗುವುದು ಖಚಿತವಾಗಿದ್ದ ಯೋಜನೆಗೆ ರಾಜ್ಯ ಸರ್ಕಾರ 65.65 ಕೋಟಿ ರೂ.ವ್ಯಯಿಸಿರುವುದಾಗ ಅಂಕಿಅಂಶ ಬಯಲುಗೊಳಿಸಿದೆ.
ಸಿಲ್ವರ್‍ಲೈನ್ ಎಂದಿಗೂ ಸಾಕಾರಗೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ತಿಳಿದಿದ್ದರೂ, ಸರ್ಕಾರವು ಕನ್ಸಲ್ಟಿಂಗ್ ಶುಲ್ಕದಲ್ಲಿ 33 ಕೋಟಿ ಪಾವತಿಸಿದೆ.
ಇದಲ್ಲದೇ ಪರಿಸರ ಅಧ್ಯಯನಕ್ಕೆ 79 ಲಕ್ಷ, ಸಮೀಕ್ಷೆಗೆ 3 ಕೋಟಿ, ಸರ್ವೆ ಕಲ್ಲು ಹಾಕಲು 1 ಕೋಟಿ, ಮಣ್ಣು ಪರೀಕ್ಷೆಗೆ 75 ಲಕ್ಷ, ಲೋಕೋಪಯೋಗಿಗೆ 6 ಕೋಟಿ, ಭೂಸ್ವಾಧೀನಕ್ಕೆ 19 ಕೋಟಿ ವೆಚ್ಚ ಮಾಡಲಾಗಿದೆ.
ಯೋಜನೆಗೆ ಅಗತ್ಯವಿರುವ ಕೇಂದ್ರದ ಯಾವುದೇ ಅನುಮೋದನೆ, ಪರಿಸರ ಅಧ್ಯಯನ ಅಥವಾ ಯೋಜನಾ ವರದಿ ಇಲ್ಲದೆಯೇ ರಾಜ್ಯ ಸರ್ಕಾರ ಈ ಕೋಟಿಗಳನ್ನು ಖರ್ಚು ಮಾಡಿದೆ. 65,000 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸುವುದಾಗಿ ಪಿಣರಾಯಿ ಸರ್ಕಾರ ಆರಂಭದಲ್ಲಿ ಹೇಳಿತ್ತು.
ರೈಲ್ವೆ ಅಭಿವೃದ್ಧಿಗೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಸಿಲ್ವರ್ ಲೈನ್‍ಗೆ ಭೂಮಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ದಕ್ಷಿಣ ರೈಲ್ವೆ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿತ್ತು. ಸಿಲ್ವರ್ ಲೈನ್ ಗೆ 183 ಹೆಕ್ಟೇರ್ ರೈಲ್ವೆ ಭೂಮಿ ಅಗತ್ಯವಿದೆ. ಸಿಲ್ವರ್‍ಲೈನ್ ನಿಲ್ದಾಣಕ್ಕಾಗಿ ಪತ್ತೆಮಾಡಲಾದ ಸ್ಥಳವಾದ ಕೋಝಿಕ್ಕೋಡ್ ಮತ್ತು ಕಣ್ಣೂರು ಇತರ ಯೋಜನೆಗಳಿಗೆ ಮೀಸಲಿಡಲಾಗಿದೆ.