ಅಯೋಧ್ಯೆ: ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಯೋಧ್ಯೆಯಲ್ಲಿ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಎಲ್ಲ ಕಡೆಯಲ್ಲೂ ರಾಮನ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ಪ್ರತಿಷ್ಠಾಪನೆ ಹಿನ್ನಲೆ ಅಲಿಗಢದಿಂದ ಅಯೋಧ್ಯೆಗೆ ಸುಮಾರು 400 ಕೆ.ಜಿ ತೂಕದ ಬೀಗ-ಕೀಲಿಕೈ ತರಲಾಗಿದೆ.
ಬೃಹತ್ ಬೀಗವು 10 ಅಡಿ ಎತ್ತರ, 4.5 ಅಡಿ ಅಗಲ ಮತ್ತು 9.5 ಇಂಚು ದಪ್ಪವಿದೆ ಎಂದು ತಿಳಿಸಿದ್ದಾರೆ.
ಕಾಶ್ಮೀರ, ಅಫ್ಗಾನಿಸ್ತಾನದಿಂದ ಬಂದ ಉಡುಗೊರೆ ಹಸ್ತಾಂತರ
ಕಾಶ್ಮೀರ, ತಮಿಳುನಾಡು ಮತ್ತು ಅಫ್ಗಾನಿಸ್ತಾನದಿಂದ ಬಂದ ಉಡುಗೊರೆಗಳನ್ನು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಅವರು ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಅವರಿಗೆ ಹಸ್ತಾಂತರಿಸಿದ್ದಾರೆ.
'ಕಾಶ್ಮೀರದಿಂದ ಬಂದ ಮುಸ್ಲಿಂ ಬಂಧುಗಳು ನನ್ನನ್ನು ಭೇಟಿಯಾಗಿ ರಾಮಮಂದಿರ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾಶ್ಮೀರದಿಂದ ತಂದ 2 ಕೆ.ಜಿ ತೂಕದ ಶುದ್ಧ ಕೇಸರಿಯನ್ನು ರಾಮಮಂದಿರಕ್ಕೆ ನೀಡುವಂತೆ ನನಗೆ ತಿಳಿಸಿದ್ದಾರೆ' ಎಂದು ಅಲೋಕ್ ಕುಮಾರ್ ಹೇಳಿದರು.
'ತಮಿಳುನಾಡಿನ ರೇಷ್ಮೆ ತಯಾರಕರು ರಾಮಮಂದಿರವನ್ನು ಚಿತ್ರಿಸಿರುವ ರೇಷ್ಮೆ ಬೆಡ್‌ಶೀಟ್ ಅನ್ನು ಕಳುಹಿಸಿದ್ದಾರೆ. ರಾಮನ ಅಭಿಷೇಕಕ್ಕಾಗಿ ಅಫ್ಗಾನಿಸ್ತಾನದಿಂದ ಕುಭಾ(ಕಾಬೂಲ್) ನದಿಯ ನೀರನ್ನು ಕಳುಹಿಸಿಕೊಡಲಾಗಿದೆ' ಎಂದರು.