HEALTH TIPS

ಭಾರತ, ಪಾಕಿಸ್ತಾನದಲ್ಲಿ ಶತಮಾನದ ಅಂತ್ಯಕ್ಕೆ ಕಾರ್ಮಿಕ ಉತ್ಪಾದಕತೆ ಶೇ 40 ಕುಸಿತ!

              ವದೆಹಲಿ: ಜಾಗತಿಕ ಆಹಾರ ಉತ್ಪಾದನೆಗೆ ಅಪಾಯವಾಗಿರುವ ಹವಾಮಾನ ಬದಲಾವಣೆಯಿಂದಾಗಿ ಶತಮಾನದ ಅಂತ್ಯದ ವೇಳೆಗೆ ಭಾರತ ಮತ್ತು ಪಾಕಿಸ್ತಾನದಂತಹ ದೇಶಗಳಲ್ಲಿ ಕಾರ್ಮಿಕ ಉತ್ಪಾದಕತೆಯು ಶೇಕಡಾ 40ರಷ್ಟು ಕಡಿಮೆಯಾಗಬಹುದು ಎಂದು ಅಧ್ಯಯನವೊಂದು ಹೇಳಿದೆ.

             'ಗ್ಲೋಬಲ್‌ ಚೇಂಜ್‌ ಬಯಾಲಜಿ' ಪತ್ರಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

ಆಗ್ನೇಯ ಮತ್ತು ದಕ್ಷಿಣ ಏಷ್ಯಾ, ಪಶ್ಚಿಮ ಮತ್ತು ಮಧ್ಯ ಆಫ್ರಿಕಾ, ಉತ್ತರ ದಕ್ಷಿಣ ಅಮೆರಿಕಾದ ಇತರ ಪ್ರದೇಶಗಳಲ್ಲಿ ದೈಹಿಕ ಕೆಲಸದ ಸಾಮರ್ಥ್ಯ ಶೇಕಡಾ 70ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಈ ಅಧ್ಯಯನ ವರದಿಯಲ್ಲಿ ಹೇಳಿದೆ.

                 'ಹವಾಮಾನ ಬದಲಾವಣೆಯು ಬೆಳೆ ಇಳುವರಿಯನ್ನು ಕುಂಠಿತ ಮಾಡಲಿದೆ. ಆಹಾರ ಭದ್ರತೆಯ ಸವಾಲುಗಳನ್ನು ಇನ್ನಷ್ಟು ಹದಗೆಡಿಸಲಿದೆ ಎನ್ನುವ ಖಚಿತ ತೀರ್ಮಾನಕ್ಕೆ ಈ ಅಧ್ಯಯನದಲ್ಲಿ ಕಂಡುಕೊಂಡ ಅಂಶಗಳ ಮೌಲ್ಯಮಾಪನದಿಂದ ಬರಲಾಗಿದೆ' ಎಂದು ಈ ಅಧ್ಯಯನದ ನೇತೃತ್ವ ವಹಿಸಿದ್ದ ಇಲಿನಾಯ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆರಾಲ್ಡ್ ನೆಲ್ಸನ್ ಹೇಳಿದರು.

                ಬ್ರಿಟನ್‌ನ ಲಾಫ್‌ಬರೊ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಮಾದರಿಗಳು, ತಾಪಮಾನ ಮತ್ತು ಆರ್ದ್ರತೆಗಳಲ್ಲಿ ಕೆಲಸ ಮಾಡುವ ಜನರು ಹಾಗೂ ಬಿಸಿಲು, ಗಾಳಿ ಸೇರಿದಂತೆ ವಿಭಿನ್ನ ಹವಾಮಾನ ಪರಿಸ್ಥಿತಿಗಳನ್ನು ಒಳಗೊಂಡ 700ಕ್ಕೂ ಹೆಚ್ಚು ಉಷ್ಣಾಂಶ ಒತ್ತಡ ಸಂಬಂಧಿತ ಪ್ರಯೋಗಗಳ ದತ್ತಾಂಶಗಳನ್ನು ಕ್ರೋಡೀಕರಿಸಿ ಈ ಅಧ್ಯಯನ ವರದಿ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries