ತಿರುಪತಿ: ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠದ್ವಾರ ದರ್ಶನದ ಸಂದರ್ಭ (2023ರ ಡಿಸೆಂಬರ್ 23ರಿಂದ ಈ ವರ್ಷದ ಜನವರಿಗೆ 1ರವರೆಗೆ) ಬರೀ ಹತ್ತು ದಿನಗಳಲ್ಲಿ ಭಕ್ತರಿಂದ ದೇವರ ಹುಂಡಿಗೆ ₹40 ಕೋಟಿ ಹಣ ಕಾಣಿಕೆಯಾಗಿ ಬಂದಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.