HEALTH TIPS

ಗ್ರಾಮೀಣ ಭಾಗದ ಶೇ 42ರಷ್ಟು ಮಕ್ಕಳಿಗೆ ಇಂಗ್ಲಿಷ್‌ ಕಠಿಣ: ಎಎಸ್‌ಇಆರ್‌

                ವದೆಹಲಿ: ದೇಶದ ಗ್ರಾಮಾಂತರ ಪ್ರದೇಶದಲ್ಲಿನ 14ರಿಂದ 18 ವಯೋಮಾನದ ಶೇ 25ರಷ್ಟು ವಿದ್ಯಾರ್ಥಿಗಳಿಗೆ ತಮ್ಮ ಪ್ರಾದೇಶಿಕ ಭಾಷೆಯಲ್ಲಿರುವ ಎರಡನೇ ತರಗತಿಯ ಪಠ್ಯವನ್ನು ನಿರರ್ಗಳವಾಗಿ ಓದಲು ಬರುವುದಿಲ್ಲ. ಅಲ್ಲದೆ ಈ ವಯಸ್ಸಿನ ಶೇ 42ರಷ್ಟು ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಸುಲಭವಾದ ವಾಕ್ಯಗಳನ್ನು ಓದಲೂ ಬರುವುದಿಲ್ಲ ಎಂದು 2023ನೇ ಸಾಲಿನ ಶಿಕ್ಷಣ ಸ್ಥಿತಿಗತಿ ವಾರ್ಷಿಕ ವರದಿ (ಎಎಸ್‌ಇಆರ್‌) ತಿಳಿಸಿದೆ.

               ಅಲ್ಲದೆ, ಈ ವಯಸ್ಸಿನ ಅರ್ಧಕ್ಕಿಂತ ಹೆಚ್ಚು ಮಕ್ಕಳಿಗೆ ಸರಳ ಭಾಗಾಕಾರವೂ ಬರುವುದಿಲ್ಲ. ಈ ಕೌಶಲಗಳನ್ನು ಸಾಮಾನ್ಯವಾಗಿ 3 ಮತ್ತು 4ನೇ ತರಗತಿ ಮಕ್ಕಳಲ್ಲಿಯೇ ನಿರೀಕ್ಷಿಸಲಾಗುತ್ತದೆ ಎಂದು ವರದಿ ಹೇಳಿದೆ.

                   ಇದರಲ್ಲಿ ಶೇ 76ರಷ್ಟು ಬಾಲಕಿಯರು ಬಾಲಕರಿಗಿಂತ ಉತ್ತಮವಾಗಿ ತಮ್ಮ ಪ್ರಾದೇಶಿಕ ಭಾಷೆಯಲ್ಲಿ 2ನೇ ತರಗತಿಯ ಪಠ್ಯವನ್ನು ಓದುತ್ತಾರೆ. ಆದರೆ ಅಂಕಗಣಿತ ಮತ್ತು ಇಂಗ್ಲಿಷ್‌ ಓದುವಿಕೆಯಲ್ಲಿ ಬಾಲಕರು ಮುಂದಿದ್ದಾರೆ.

               ದೇಶದ 26 ರಾಜ್ಯಗಳ 28 ಜಿಲ್ಲೆಗಳಲ್ಲಿನ 14ರಿಂದ 18 ವಯೋಮಾನದ 34,745 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಪ್ರತಿ ರಾಜ್ಯದಿಂದ ಒಂದೊಂದು ಗ್ರಾಮಾಂತರ ಜಿಲ್ಲೆ ಹಾಗೂ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಿಂದ ತಲಾ ಎರಡು ಜಿಲ್ಲೆಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

               'ಪ್ರಥಮ್‌ ಫೌಂಡೇಷನ್‌' ಈ ಸಮೀಕ್ಷಾ ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೈಕ್ಷಣಿಕ ನೀತಿಗಳನ್ನು ರೂಪಿಸುವಾಗ ಎಎಸ್‌ಇಆರ್‌ ವರದಿಗಳನ್ನು ಗಮನಿಸುತ್ತದೆ.

                ಇದು ರಾಷ್ಟ್ರೀಯ ಮಟ್ಟದ ಮನೆ-ಮನೆ ಸಮೀಕ್ಷೆಯಾಗಿದೆ. ಗ್ರಾಮೀಣ ಭಾರತದ ಮಕ್ಕಳ ಶಾಲೆ ಹಾಗೂ ಕಲಿಕೆಯ ಕುರಿತ ಮಾಹಿತಿಯನ್ನು ಈ ಸಮೀಕ್ಷೆ ನೀಡುತ್ತದೆ. 2005ರಿಂದ ಎಎಸ್‌ಇಆರ್‌ ಈ ಸಮೀಕ್ಷೆಗಳನ್ನು ನಡೆಯುತ್ತಿದೆ.

               ಭಾರತದ ಯುವಕರು ಯಾವ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬುದನ್ನೂ 2023ರ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಅವರ ಓದುವಿಕೆ, ಗಣಿತದ ಸಾಮರ್ಥ್ಯ, ಡಿಜಿಟಲ್‌ ಅರಿವು, ಕೌಶಲಗಳ ಬಗ್ಗೆ ಮಾಹಿತಿ ನೀಡುತ್ತದೆ.

               3ನೇ ತರಗತಿ ಮಕ್ಕಳು ಓದುವಿಕೆ ಮತ್ತು ಅಂಕಗಣಿತದ ಕೌಶಲಗಳನ್ನು ಪಡೆದುಕೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಅಗತ್ಯದ ಕುರಿತು ಎನ್‌ಇಪಿ 2020ರಲ್ಲಿ ಹೇಳಲಾಗಿದೆ ಎಂದೂ ವರದಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries