ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ 44ನೇ ವಾರ್ಷಿಕೋತ್ಸವವು ಇತ್ತೀಚೆಗೆ ಜರಗಿತು. ಪ್ರಾತಃಕಾಲ ಮುಗು ಶ್ರೀ ಸುಬ್ರಾಯ ದೇವಸ್ಥಾನದ ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್ ಅವರಿಂದ ಗಣಪತಿ ಹೋಮ, ದೀಪ ಪ್ರತಿಷ್ಠೆ, ಶ್ರೀ ಗೋಪಾಲಕೃಷ್ಣ ಪೈ ಬದಿಯಡ್ಕ ಅವರಿಂದ ದೀಪಜ್ವಲನೆ ನಡೆಯಿತು. ಶ್ರೀ ಧರ್ಮಶಾಸ್ತಾ ಭಜನಾ ಸಂಘ, ಮಾತೃಮಂಡಳಿ ಹಾಗೂ ಶ್ರೀ ಕುಮಾರಸ್ವಾಮಿ ಭಜನಾ ಸಂಘ ನೀರ್ಚಾಲು ಇವರಿಂದ ಭಜನಾ ಸೇವೆ, ಶ್ರೀ ಧರ್ಮಶಾಸ್ತಾ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ, ವಿಶ್ವನಾಥ ನಾಯ್ಕ ಬಲವಂತಡ್ಕ ಶಿಷ್ಯಂದಿರಾದ ಹೊಸತಾಗಿ ಸೇರಿದ ಮಕ್ಕಳಿಗೆ ರಂಗಪ್ರವೇಶ ಜರಗಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಅಧ್ಯಕ್ಷ ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ, ಯಕ್ಷಗಾನ ಕಲಾವಿದ ದಿವಾಕರ ಮಾವಿನಕಟ್ಟೆ ಗೌರವ ಉಪಸ್ಥಿತರಿದ್ದರು. ಶ್ರೀಮಂದಿರದ ಗುರುಸ್ವಾಮಿ ರಮೇಶ್ ಆಚಾರ್ಯ ಬೇಳ ಇವರ 41ನೇ ಶಬರಿಮಲೆ ಯಾತ್ರೆಗಾಗಿ, ಮಂದಿರದ ಹಿರಿಯ ಸದಸ್ಯರುಗಳಾದ ರಾಮನಾಯ್ಕ ಕುಂಟಿಕಾನ, ಮಹಾಲಿಂಗ ನಾಯ್ಕ ಚೋಯಿಮೂಲೆ, ದೂಮಣ್ಣ ಶೆಟ್ಟಿ ಮರಾಟಿಕೆರೆ ಕೋಡಿಂಗಾರು, ಗೋಪಾಲಕೃಷ್ಣ ನಾಯ್ಕ ನೀರ್ಚಾಲು ಇವರನ್ನು ಗೌರವಿಸಲಾಯಿತು. ನಾರಾಯಣ ಶೆಟ್ಟಿ ನೀರ್ಚಾಲು, ನಾರಾಯಣ ನಾಯ್ಕ ಸಿಪಿಸಿಆರ್‍ಐ ವಿಟ್ಲ, ಚೋಮ ನಾಯ್ಕ್ ಮೈಕ್ಕುರಿ, ಜಯಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಷ್ಣನಾಯ್ಕ ಮಲ್ಲಡ್ಕ ಸ್ವಾಗತಿಸಿ, ಉಪಾಧ್ಯಕ್ಷ ಸುದಾಮ ಮಾಸ್ತರ್ ಮಲ್ಲಡ್ಕ ವಂದಿಸಿದರು. ಬಾಲಕೃಷ್ಣ ನಾಯ್ಕ ನೀರ್ಚಾಲು ನಿರೂಪಿಸಿದರು.
ಮಧ್ಯಾಹ್ನ ಶರಣಂ ವಿಳಿ, ಮಹಾಪೂಜೆ, ಅನ್ನದಾನ. ಸಂಜೆ ತಾಯಂಬಕ, ದೀಪಾರಾಧನೆ, ಓಂಕಾರ ಬಾಲಗೋಕುಲ ರತ್ನಗಿರಿ ಇವರಿಂದ ಭಜನೆ, ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಿಂದ ಉಲ್ಪೆ ಮೆರವಣಿಗೆ ಹೊರಟು ಮೇಲಿನ ಪೇಟೆಯಾಗಿ ಕುಣಿತ ಭಜನೆ ಹಾಗೂ ಚೆಂಡೆಮೇಳದೊಂದಿಗೆ ಶ್ರೀಮಂದಿರಕ್ಕೆ ಆಗಮನ, ರಾತ್ರಿ ಶ್ರೀಮಹಾವಿಷ್ಣು ಭಜನಾ ಸಂಘ ಕಾರ್ಮಾರು, ಶ್ರೀ ಅನ್ನಪೂರ್ಣೇಶ್ವರೀ ಭಜನಾ ಸಂಘ ಕುಂಟಿಕಾನ ಇವರಿಂದ ಭಜನೆ ನಡೆಯಿತು. ರಾತ್ರಿ ಶರಣಂ ವಿಳಿ, ಮಹಾಪೂಜೆ, ಪ್ರಸಾದ ವಿತರಣೆಯ ನಂತರ ಕುಂಟಾಲುಮೂಲೆ ಚಿರಂಜೀವಿ ಯಕ್ಷಗಾನ ಕಲಾಸಂಘ ಉಪ್ಲೇರಿ ಇವರಿಂದ ಯಕ್ಷಗಾನ ಬಯಲಾಟ ಸುದರ್ಶನ ವಿಜಯ ಶ್ವೇತ ಕುಮಾರ ಚರಿತ್ರೆ ಪ್ರದರ್ಶನಗೊಂಡಿತು.