ನವದೆಹಲಿ: ಅರ್ಜುನ ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದಂತೆ ಪಂಜಾಬ್‌ನ ಜಲಂಧರ್ ಠಾಣೆಯ ಪೊಲೀಸರು, ಕೃತ್ಯ ನಡೆದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಟೋ ರಿಕ್ಷಾ ಚಾಲಕ ವಿಜಯಕುಮಾರ್ ಬಂಧಿತ ಆರೋಪಿ.

2000 ಇಸವಿಯ ಅರ್ಜುನ ಪ್ರಶಸ್ತಿಗೆ ದೇವೊಲ್ ಭಾಜನರಾಗಿದ್ದರು.
ಬಂಧಿತ ಮಾದಕದ್ರವ್ಯ ವ್ಯಸನಿಯಾಗಿದ್ದ. ಜಗಳ ವಿಕೋಪಕ್ಕೆ ತಿರುಗಿದಾಗ ದೇವೊಲ್ ಬಳಿ ಇದ್ದ ಇಲಾಖೆಯ ರಿವಾಲ್ವಾರ್ ಕಸಿದುಕೊಂಡ ವಿಜಯಕುಮಾರ್, ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ದೇವೊಲ್ ಮೃತದೇಹ ಬಸ್ತಿ ಬಾವಾ ಖೇಲ್ ಬಳಿ ಸಿಕ್ಕಿತು ಎಂದು ಪೊಲೀಸರು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಮೊದಲಿಗೆ ಇದೊಂದು ಹಿಟ್ ಅಂಡ್ ರನ್ ಪ್ರಕರಣ ಎಂದು ಭಾವಿಸಿದ್ದರು. ಆದರೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ.