ಮಧೂರು : ಮಧೂರು ಶ್ರೀಕಾಳಿಕಾಂಬಾ ಮಠದ ವಿಶ್ವಬ್ರಾಹ್ಮಣ ಯುವಕ ಸಂಘದ ವತಿಯಿಂದ ನಡೆಯುವ ವಿಶ್ವರೂಪಂ ಯುವ ಸಮಾವೇಶದ ಸ್ಪರ್ಧಾ ಕಾರ್ಯಕ್ರಮ ಅಧ್ಯಾಯ 4 ವೈವಿಧ್ಯಮಯ ಕರಕುಶಲ ಸ್ಪರ್ಧೆಯೊಂದಿಗೆ ಕಣ್ಮನ ಸೆಳೆಯಿತು.ರಾಷ್ಟ್ರೀಯ ಸೇವಿಕಾ ಸಮಿತಿಯ ಸದಸ್ಯೆ ಬೇಬಿ ಟೀಚರ್ ಉದ್ಘಾಟಿಸಿದರು.
ಯುವಕ ಸಂಘದ ಅಧ್ಯಕ್ಷರಾದ ಮಹೇಶ್ ಆಚಾರ್ಯ ಮಧೂರು ಸಭೆಯ ಅಧ್ಯಕ್ಷತೆವಹಿಸಿದ್ದರು.ಮಹಿಳಾ ಸಂಘದ ಕೋಶಾಧಿಕಾರಿ ಗಾಯತ್ರಿ ಸುಬ್ರಹ್ಮಣ್ಯ ಆಚಾರ್ಯ, ಮಠದ ಆಡಳಿತ ಸಮಿತಿ ಕೋಶಾಧಿಕಾರಿ ಯೋಗೇಂದ್ರ ಆಚಾರ್ಯ ಪರಕ್ಕಿಲ, ಭಜನಾ ಸಂಘದ ಕಾರ್ಯದರ್ಶಿಯಾದ ತಿಲಕೇಶ ಆಚಾರ್ಯ ಪರಕ್ಕಿಲ, ಆಡಳಿತ ಸಮಿತಿಯ ಮಾಜಿ ಕಾರ್ಯದರ್ಶಿ ನಿರಂಜನ ಆಚಾರ್ಯ ಅಮೈ ಉಪಸ್ಥಿತರಿದ್ದರು. ಗಣೇಶ ಆಚಾರ್ಯ ಅಮೈ ಸ್ವಾಗತಿಸಿ, ವರಪ್ರಸಾದ್ ಆಚಾರ್ಯ ಕಂಬಾರು ವಂದಿಸಿದರು. ಬಾಲಕೃಷ್ಣ ಆಚಾರ್ಯ ಪುತ್ತಿಗೆ ನಿರೂಪಿಸಿದರು.