ತಿರುವನಂತಪುರಂ; ಜನ ಸಾಮಾನ್ಯರು ನೆಚ್ಚಿಕೊಂಡಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವರಕ್ಷಕ ಔಷಧಗಳು ಲಭ್ಯವಾಗುತ್ತಿಲ್ಲವೆಂದು ದುರುಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳವರೆಗೆ ಔಷಧಿಗಳ ಕೊರತೆ ಇದೆ.
ಎರಡು ವರ್ಷಗಳಿಂದ ಔಷಧ ಕಂಪನಿಗಳಿಗೆ ಸರ್ಕಾರ 500 ಕೋಟಿ ರೂ.ನೀಡಲು ಬಾಕಿಯಿದೆ. ಹಣದ ಕೊರತೆಯನ್ನು ಮುಂದಿಟ್ಟುಕೊಂಡು ಹಲವು ಬಾರಿ ಆರೋಗ್ಯ ಇಲಾಖೆಯ ಬೇಡಿಕೆಯನ್ನು ಹಣಕಾಸು ಇಲಾಖೆ ತಿರಸ್ಕರಿಸಿರುವುದು ಬಿಕ್ಕಟ್ಟು ಉಲ್ಬಣಿಸಿದೆ. ಏನು ಮಾಡಬೇಕು ಎಂಬುದಕ್ಕೆ ಆರೋಗ್ಯ ಇಲಾಖೆ ಬಳಿಯೂ ಉತ್ತರವಿಲ್ಲ. ದೂರು ಬಂದಲ್ಲಿ ತನಿಖೆಯನ್ನು ಘೋಷಿಸಲಷ್ಟೇ ಸಾಧ್ಯವಿದೆ.
ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಮತ್ತು ಮೆಟ್‍ಫಾರ್ಮಿನ್, ಗ್ಲಿಮಿ ಪ್ರೈಡ್, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಆಮ್ಲೋ, ಸೋಂಕಿಗೆ ಅಜಿತ್ರೋಮೈಸಿನ್, ಆಮ್ಲೀಯತೆಯನ್ನು ಕಡಿಮೆ ಮಾಡಲು ಪ್ಯಾಂಟೊಪ್ರಜೋಲ್, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಕ್ಲೋಪಿಡೋಗ್ರೆಲ್ ಮತ್ತು ಹೃದ್ರೋಗ ಮತ್ತು ಪಾಶ್ರ್ವವಾಯುಗಳಿಗೆ ಹಲವಾರು ಔಷಧಿಗಳ ಕೊರತೆಯು ಅನೇಕ ಆಸ್ಪತ್ರೆಗಳಲ್ಲಿದೆ.
ಕೇರಳ ವೈದ್ಯಕೀಯ ಸೇವಾ ನಿಗಮವು ಔಷಧ ವಿತರಣೆಯ ಉಸ್ತುವಾರಿ ವಹಿಸಿಕೊಂಡಿದೆ. ಹಣಕಾಸು ಇಲಾಖೆ ಹಣ ನೀಡದಿದ್ದರೆ ಮಾರ್ಚ್ ವರೆಗೆ ಔಷಧ ಕೊರತೆ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ. ಮೂರು ಹಂತದಲ್ಲಿ ಕಂಪನಿಗಳಿಂದ ಖರೀದಿಸಿದ ಔಷಧಕ್ಕೆ ಹಣ ಪಾವತಿಯಾಗಿಲ್ಲ. ಔಷಧಿಗಳ ಕೊರತೆ ಇಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಾಮೂಲಿ ಪಲ್ಲವಿಯನ್ನು ಪುನರುಚ್ಚರಿಸಿದ್ದಾರೆ. ಆದರೆ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯವಾಗುತ್ತಿಲ್ಲ.