ಅಯೋಧ್ಯೆ: ರಾಮ ಮಂದಿರ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ರಾಮ ಜನ್ಮಭೂಮಿ ಆವರಣದಲ್ಲಿ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 50ಕ್ಕೂ ಹೆಚ್ಚು ವಾದ್ಯಗಳಿಂದ 'ಮಂಗಳ ಧ್ವನಿ' ಮಾರ್ದನಿಸಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನೆರವೇರುವುದಕ್ಕೂ ಎರಡು ಗಂಟೆಗಳ ಮುನ್ನ 'ಮಂಗಳ ಧ್ವನಿ' ಕಾರ್ಯಕ್ರಮ ಆರಂಭವಾಗಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಭಾಗವಾದ ವೀಣೆ, ಮಹಾರಾಷ್ಟ್ರದ ಸುಂದರಿ, ಪಂಜಾಬ್‌ನ ಅಲ್ಗೋಝಾ, ಆಂಧ್ರಪ್ರದೇಶದ ಘಟಂ ಸೇರಿ ವಿವಿಧ ವಾದ್ಯಗಳನ್ನು ಕಾರ್ಯಕ್ರಮದಲ್ಲಿ ನುಡಿಸಲಾಗುವುದು.
'ಮಂತ್ರಘೋಷಗಳು ಮತ್ತು ಗಣ್ಯರ ಭಾಷಣಗಳು ಇಲ್ಲದ ವೇಳೆ ವಾದ್ಯಗಳನ್ನು ನುಡಿಸಲಾಗುವುದು. ನಮ್ಮ ದೇಶದ ವಿವಿಧ ಸಂಸ್ಕೃತಿಯನ್ನು ತೋರ್ಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀರಾಮನಿಗೆ ಗೌರವ ತೋರುವ ನಿಟ್ಟಿನಲ್ಲಿ ದೇಶದ ವಿವಿಧ ಪರಂಪರೆಯನ್ನು ಈ ಕಾರ್ಯಕ್ರಮವು ಬೆಸೆಯುತ್ತದೆ' ಎಂದೂ ತಿಳಿಸಿದ್ದಾರೆ.