ಪಾಲಕ್ಕಾಡ್: ಪ್ರಮೀಳಾ ಶಶಿಧರನ್ ಪಾಲಕ್ಕಾಡ್ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. 52 ಸದಸ್ಯ ಬಲದ ನಗರಸಭೆಯಲ್ಲಿ ಪ್ರಮೀಳಾ ಶಶಿಧರನ್ 28 ಮತಗಳನ್ನು ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾದರು.
ಯುಡಿಎಫ್ ಅಭ್ಯರ್ಥಿ ಮಿನಿ ಬಾಬು 17 ಹಾಗೂ ಎಲ್ ಡಿಎಫ್ ಅಭ್ಯರ್ಥಿ ಉಷಾ ರಾಮಚಂದ್ರನ್ 7 ಮತ ಪಡೆದರು.
ಅಧ್ಯಕ್ಷೆ ಪ್ರಿಯಾ ಅಜಯನ್ ಕಳೆದ ತಿಂಗಳು ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಚುನಾವಣೆ ನಡೆಯಿತು. ಬಿಜೆಪಿಯ ರಾಜ್ಯ ಸಮಿತಿ ಸದಸ್ಯೆ ಪ್ರಮೀಳಾ ಶಶಿಧರನ್ ಅವರು ಈ ಮೊದಲು ನಗರಸಭೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು 2015 ರಿಂದ 2020 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಗರಸಭೆ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಮೀಳಾ ಪ್ರಮಾಣ ವಚನ ಸ್ವೀಕರಿಸಿದರು.