ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇದೇ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ 55 ದೇಶಗಳಿಂದ 100ಕ್ಕೂ ಹೆಚ್ಚು ಗಣ್ಯರು ಆಗಮಿಸಲಿದ್ದಾರೆ ಎಂದು ವಿಶ್ವ ಹಿಂದೂ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಮುಖ್ಯಸ್ಥ ಸ್ವಾಮಿ ವಿಜ್ಞಾನಂದ ಹೇಳಿದ್ದಾರೆ.

55 ದೇಶಗಳಿಂದ ರಾಯಭಾರಿಗಳು, ಸಚಿವರು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲಿದ್ದಾರೆ. ಪ್ರಭು ಶ್ರೀ ರಾಮನ ವಂಶಸ್ಥೆ ಎಂದು ಹೇಳಿಕೊಳ್ಳುವ ಕೊರಿಯನ್ ರಾಣಿಗೂ ಆಹ್ವಾನ ನೀಡಲಾಗಿದೆ ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಯಾವೆಲ್ಲಾ ದೇಶಗಳಿಗೆ ಆಹ್ವಾನ?
ಅರ್ಜಂಟೈನಾ, ಆಸ್ಟ್ರೇಲಿಯಾ. ಬೆಲರೂಸ್, ಬೊಟ್ಸ್‌ವಾನಾ, ಕೆನಡಾ, ಕೊಲಂಬಿಯಾ, ಡೆನ್ಮಾರ್ಕ್, ಡೊಮಿನಿಕಾ, ಡೆಮೊಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೊ (ಡಿಆರ್‌ಸಿ), ಈಜಿಪ್ಟ್, ಇಥಿಯೋಪಿಯಾ, ಫಿಜಿ, ಇಟಲಿ, ಫಿನ್‌ಲ್ಯಾಂಡ್, ಫ್ರಾನ್ಸ್, ಜರ್ಮನಿ, ಘಾನಾ, ಗಯಾನಾ. ಹಾಂಗ್‌ಕಾಂಗ್, ಹಂಗೇರಿ, ಇಂಡೋನೇಷಿಯಾ, ಐರ್ಲೆಂಡ್, ಜಪಾನ್ ಸೇರಿದಂತೆ 55 ದೇಶಗಳಿಗೆ ಆಹ್ವಾನ ನೀಡಲಾಗಿದೆ.
ಎಲ್ಲಾ ವಿದೇಶಿ ಪ್ರತಿನಿಧಿಗಳು ಜ.20ರಂದು ಲಖನೌ ತಲುಪಲಿದ್ದು, ಜ.21ರ ಸಂಜೆ ಅಯೋಧ್ಯೆಗೆ ಆಗಮಿಸಲಿದ್ದಾರೆ. ಹವಾಮಾನ ವೈಪರೀತ್ಯಗಳ ಕಾರಣದಿಂದ ವಿದೇಶಿ ಗಣ್ಯರು ಮುಂಚಿತವಾಗಿಯೇ ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.