ತಿರುವನಂತಪುರಂ: ಆರ್ಥಿಕ ಮುಗ್ಗಟ್ಟಿನ ನಡುವೆಯೂ ಸರ್ಕಾರ ಸಂಭ್ರಮಾಚರಣೆಗೆ ಕಡಿವಾಣ ಹಾಕಿಲ್ಲ. ಸ್ಥಳೀಯಾಡಳಿತ ದಿನಾಚರಣೆಗೆ ಸಂಬಂಧಿಸಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಹಣವನ್ನು ಸಂಗ್ರಹಿಸಲಾಗುತ್ತದೆ.
ಸ್ಥಳೀಯ ಇಲಾಖೆಯು ಸತತ ಎರಡನೇ ವರ್ಷವೂ 5.55 ಕೋಟಿ ರೂ.ಗಳನ್ನು ಸಂಗ್ರಹಿಸಲು ನಿರ್ಧರಿಸಿದೆ. ಹಲವು ಸ್ಥಳೀಯಾಡಳಿತ ಸಂಸ್ಥೆಗಳು ಯೋಜನೆಗಳ ಅನುಷ್ಠಾನಕ್ಕೆ ಸಾಕಷ್ಟು ಹಣವಿಲ್ಲದೆ ಪರದಾಡುತ್ತಿರುವ ಸಂದರ್ಭದಲ್ಲಿ ಹೊಸ ಆದೇಶ ಬಂದಿದೆ. ಹಣವನ್ನು ಪ್ರಧಾನ ನಿರ್ದೇಶಕರ ಖಾತೆಗೆ ಜಮಾ ಮಾಡಬೇಕಿದೆ.
ತ್ರಿಸ್ಥರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾರ್ಪೋರೇಶನ್ ಗಳು ತಲಾ 6 ಲಕ್ಷ ರೂ., ನಗರಸಭೆ ತಲಾ 1.25 ಲಕ್ಷ ರೂ., ಜಿಲ್ಲಾ ಪಂಚಾಯಿತಿ ತಲಾ 2 ಲಕ್ಷ ರೂ., ಬ್ಲಾಕ್ ಪಂಚಾಯಿತಿಗಳು ತಲಾ 70 ಸಾವಿರ ಹಾಗೂ ಗ್ರಾಮ ಪಂಚಾಯಿತಿಗಳು ತಲಾ 30 ಸಾವಿರ ರೂ.ಸಂಗ್ರಹಿಸಿ ನೀಡಬೇಕಿದೆ.