ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾರ್ಚ್ 15ರಿಂದ 17ರವರೆಗೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕೇಂದ್ರೀಯ ಚುನಾವಣಾ ಆಯೋಗ ಹೇಳಿರುವುದಾಗಿ ಇಂಟ್ರಾಫ್ಯಾಕ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಆರು ವರ್ಷಗಳ ಅಧಿಕಾರವಧಿಯ ಅಧ್ಯಕ್ಷ ಸ್ಥಾನಕ್ಕೆ ಪುಟಿನ್ ಅವರೇ ಆಯ್ಕೆಯಾಗುತ್ತಾರೆ ಎಂದು ಅವರ ಬೆಂಬಲಿಗರು ಮಾತ್ರವಲ್ಲ ವಿರೋಧಿಗಳೂ ಹೇಳುತ್ತಿದ್ದಾರೆ. ಪುಟಿನ್ ಒಂದೊಮ್ಮೆ ಆಯ್ಕೆಯಾದಲ್ಲಿ 18ನೇ ಶತಮಾನದ ನಂತರ ಅತಿ ದೀರ್ಘ ಕಾಲ ಅಧಿಕಾರದಲ್ಲಿದ್ದವರ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ.
ಉಕ್ರೇನ್‌ನಲ್ಲಿ ಯುದ್ಧ ಆರಂಭವಾಗುತ್ತಿದ್ದಂತೆ, ಪುಟಿನ್ ಅವರು ವಿರೋಧಪಕ್ಷಗಳ ವಿರುದ್ಧವೂ ತಮ್ಮ ದಮನ ನೀತಿಯನ್ನು ಮುಂದುವರಿಸಿದ್ದರು. ಅವರನ್ನು ಟೀಕಿಸುವವರಲ್ಲಿ ಹಲವರು ದೇಶ ತೊರೆದಿದ್ದರೆ, ಇನ್ನೂ ಕೆಲವರು ಜೈಲು ಸೇರಿದ್ದಾರೆ.
ಯುದ್ಧ ವಿರೋಧಿ ನೀತಿ ಹೊಂದಿದ್ದ ಬೋರಿಸ್ ನಾಡೆಜಿದ್ದೀನ್ ಅವರು ಪುಟಿನ್ ಎದುರಾಳಿಯಾಗಲಿದ್ದಾರೆ ಎಂದೆನ್ನಲಾಗಿದೆ. ನಾಮಪತ್ರ ಸಲ್ಲಿಸಲು ಅಗತ್ಯ ಸಂಖ್ಯೆಯ ಬೆಂಬಲಿಗರ ಸಹಿ ಬೇಕಿದ್ದು, ಅದಕ್ಕಾಗಿ ಅವರು ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ.
1999ರಿಂದ ಪುಟಿನ್ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. 1999ರಲ್ಲಿ ಮೂರು ತಿಂಗಳು ಪ್ರಭಾರ ಅಧ್ಯಕ್ಷರಾಗಿದ್ದಾರೆ. 2000-2004, 2004ರಿಂದ 2008, 2012-2018, 2018ರಿಂದ ಇಲ್ಲಿಯವರೆಗೆ ಅಧ್ಯಕ್ಷರಾಗಿದ್ದಾರೆ.