ನವದೆಹಲಿ: ಹೊಸ ವರ್ಷದಂದು ರೂಪಾಯಿ ಡಾಲರ್ ಎದುರು ಕುಸಿತ ಕಂಡಿದ್ದು, 5 ಪೈಸೆಯಷ್ಟು ಕುಸಿತ ಕಂಡಿದ್ದು, ದೇಶೀಯ ಕರೆನ್ಸಿ ಯುಎಸ್ ಡಾಲರ್ ವಿರುದ್ಧ 83.21 ರೂಪಾಯಿಗಳಷ್ಟಾಗಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆ ಮುಚ್ಚಲ್ಪಟ್ಟಿದ್ದವು
ದಿನದ ಆರಂಭದಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಳೀಯ ಕರೆನ್ಸಿ ಮೌಲ್ಯ ಡಾಲರ್ ಎದುರು 83.18 ರೂಪಾಯಿಗಳಾಗಿತ್ತು. ಅಂತಿಮವಾಗಿ 5 ಪೈಸೆಯಷ್ಟು ಕುಸಿತ ಕಂಡಿದ್ದು 83.21 ರೂಪಾಯಿಗಳಷ್ಟಾಯಿತು.
ಶುಕ್ರವಾರ, 2023 ರ ಕೊನೆಯ ವಹಿವಾಟಿನ ದಿನದಂದು ಯುಎಸ್ ಡಾಲರ್ ವಿರುದ್ಧ ರೂಪಾಯಿ 83.16 ರಷ್ಟಾಗಲು 4 ಪೈಸೆಗಳಷ್ಟು ಏರಿಕೆ ಕಂಡಿತ್ತು.