HEALTH TIPS

5 ಲಕ್ಷ ವಲಸಿಗರನ್ನು ದೇಶದಿಂದ ಹೊರ ಹಾಕಿದ ಪಾಕಿಸ್ತಾನ

             ಲಾಹೋರ್: ಪಾಕಿಸ್ತಾನ ಸರ್ಕಾರದ ಗಡಿಪಾರು ಕಾರ್ಯಾಚರಣೆಯ ಭಾಗವಾಗಿ ಈಗಾಗಲೇ ಸುಮಾರು 5,00,000ಕ್ಕೂ ಅಧಿಕ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ತಿಳಿದುಬಂದಿದೆ.

             ಈ ಕುರಿತು ಪಾಕಿಸ್ತಾನ ಸರ್ಕಾರ ಸಂಸತ್ ನಲ್ಲಿ ಮಾಹಿತಿ ನೀಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಪಾಕಿಸ್ತಾನದ ಆಂತರಿಕ ಸಚಿವಾಲಯ ಸೆನೆಟ್ ಅಥವಾ ಸಂಸತ್ತಿನ ಮೇಲ್ಮನೆಗೆ ಗಡಿಪಾರು ಕಾರ್ಯಾಚರಣೆಯ ಮಾಹಿತಿ ನೀಡಿದ್ದು, ಅದರಂತೆ ಪಾಕಿಸ್ತಾನದಲ್ಲಿದ್ದ ಸುಮಾರು 5 ಲಕ್ಷಕ್ಕೂ ಅಧಿಕ ವಲಸಿಗರನ್ನು ದೇಶದಿಂದ ಹೊರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದೆ.

             ವಾಪಸಾತಿ ಮತ್ತು ಗಡೀಪಾರು ಅಭಿಯಾನದ ಪ್ರಸ್ತುತ ಸ್ಥಿತಿಯ ಬಗ್ಗೆ ಸೆನೆಟರ್ ಮೊಹ್ಸಿನ್ ಅಜೀಜ್ ಎತ್ತಿದ ಪ್ರಶ್ನೆಗಳಿಗೆ ಪಾಕಿಸ್ತಾನದ ಆಂತರಿಕ ಸಚಿವಾಲಯ ಉತ್ತರ ನೀಡಿದ್ದು, "ಸುಮಾರು 1.7 ಮಿಲಿಯನ್ ಅಕ್ರಮ ವಲಸಿಗರು ದೇಶದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಅಫ್ಘಾನಿಸ್ತಾನದವರು. ನಮ್ಮ ದೇಶದಲ್ಲಿ ವಾಸಿಸಲು ಅಗತ್ಯವಾದ ಯಾವುದೇ ಕಾನೂನಾತ್ಮಕ ದಾಖಲೆಗಳಿಲ್ಲದೆ ಅವರು ಇಲ್ಲಿದ್ದಾರೆ. ಅಕ್ರಮ ನಿವಾಸಿಗಳ ಗಡಿಪಾರು ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದ ನಂತರ ಸರಿಸುಮಾರು 5,41,210 ಜನರನ್ನು ವಾಪಸ್ ಕಳುಹಿಸಲಾಗಿದೆ" ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

                ಅಂತೆಯೇ ಬಾಕಿ ಉಳಿದವರನ್ನು ಗುರುತಿಸಿ ಗಡಿಪಾರು ಮಾಡುವ ಪ್ರಯತ್ನಗಳು ನಡೆಯುತ್ತಿವೆ. 5,00,000 ಅಕ್ರಮ ವಲಸಿಗರ ಪೈಕಿ ಶೇಕಡಾ 95 ಕ್ಕೂ ಹೆಚ್ಚು ಅಫ್ಘಾನ್ ಪ್ರಜೆಗಳಿದ್ದಾರೆ" ಎಂದು ಮೂಲಗಳು ದೃಢಪಡಿಸಿವೆ. ಅಕ್ಟೋಬರ್ 2023 ರಲ್ಲಿ ಸರ್ಕಾರವು ಎಲ್ಲಾ ಅಕ್ರಮ ವಲಸಿಗರಿಗೆ ಅಕ್ಟೋಬರ್ 31 ರೊಳಗೆ ದೇಶವನ್ನು ತೊರೆಯುವಂತೆ ಅಂತಿಮ ಗಡುವು ನೀಡಿತ್ತು. ಗಡುವು ಮುಗಿದ ನಂತರ ಬಲವಂತದಿಂದ ಅವರನ್ನು ಹೊರಹಾಕುವುದಾಗಿ ಪಾಕಿಸ್ತಾನ ಸರ್ಕಾರ ಎಚ್ಚರಿಕೆ ನೀಡಿತ್ತು. ಬಳಿಕ ವಲಸಿಗರನ್ನು ಹೊರ ಹಾಕುವ ಕಾರ್ಯಾಚರಣೆ ನಡೆದಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries