ಗುರುವಾಯೂರು: ಗುರುವಾಯೂರಿನಲ್ಲಿ ನವೀಕೃತ ಪಾಂಚಜನ್ಯಂ ಅತಿಥಿ ಗೃಹ ಭಾನುವಾರ ಉದ್ಘಾಟನೆಗೊಂಡಿದ್ದು, ಭಕ್ತರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಸೌಲಭ್ಯವಿರುವ ಕೊಠಡಿಗಳು ದೊರೆಯಲಿವೆ.
ಗುರುವಾಯೂರು ದೇವಸ್ವಂ ಒಡೆತನದ ಈ ಅತಿಥಿ ಗೃಹದಲ್ಲಿ ಮೂರು ಹಾಸಿಗೆಗಳಿರುವ 26 ಎಸಿ ಕೊಠಡಿಗಳಿವೆ. ಎಸಿ ಕೊಠಡಿಗಳ ಬಾಡಿಗೆ ಕೇವಲ 1200 ರೂ.
55 ನಾನ್ ಎಸಿ ಕೊಠಡಿಗಳಿವೆ. ಮೂರು ಹಾಸಿಗೆಗಳ ಈ ಕೊಠಡಿಯ ಬೆಲೆ ಕೇವಲ 600 ರೂ. ಐದು ಹಾಸಿಗೆಗಳಿರುವ 24 ಕೊಠಡಿಗಳಿವೆ. ಈ ಕೋಣೆಗೆ 800 ಮಾತ್ರ. ಆನ್‍ಲೈನ್‍ನಲ್ಲಿ ಕೊಠಡಿಗಳನ್ನು ಬುಕ್ ಮಾಡುವ ವ್ಯವಸ್ಥೆಯೂ ಈ ತಿಂಗಳಲ್ಲೇ ಜಾರಿಗೆ ಬರಲಿದೆ. ಆನ್‍ಲೈನ್‍ನಲ್ಲಿ ಬುಕ್ ಮಾಡುವಾಗ ದರಗಳು ಸ್ವಲ್ಪ ಹೆಚ್ಚಾಗಿಡಿಟiಜe.
ಐದು ಅಂತಸ್ತಿನ ಪಾಂಚಜನ್ಯವನ್ನು 11 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಮಹಡಿಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಗೋಡೆಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ. ಕೋಣೆಯನ್ನು ಅಲಂಕರಿಸಲಾಗಿಜe. ಸ್ವಾಗತ ಕೌಂಟರ್ ಅನ್ನು ಹೆಚ್ಚು ಆಕರ್ಷಕವಾಗಿ ಮಾಡಲಾಗಿದೆ.
ಪಾರ್ಕಿಂಗ್ ಮತ್ತು ಶೌಚಾಲಯಗಳನ್ನು ಸುಧಾರಿಸಲಾಗಿದೆ. ದೇವಸ್ವಂ ಇಂಜಿನಿಯರ್‍ಗಳ ಉಸ್ತುವಾರಿಯಲ್ಲಿ ಉರಾಲುಂಗಲ್ ಲೇಬರ್ ಸೊಸೈಟಿಯಿಂದ ನವೀಕರಣ ಕಾರ್ಯ ನಡೆಸಿದೆ.