ಮಂಜೇಶ್ವರ : ಪಿಎಂಜಿಎಸ್ ವೈ(ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನ) ಯೋಜನೆಯಲ್ಲಿ 6.41 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ನಂದಾರ್ ಪದವು- ಪೆÇಯ್ಯತ್ತಬೈಲು- ದೈಗೋಳಿ- ಮೀಯಪದವು ರಸ್ತೆಯ ಕಾಮಗಾರಿಗೆ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಶುಕ್ರವಾರ ಶಿಲಾನ್ಯಾಸಗೈದರು.
ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿಗಳಾದ ಮೊಯಿದಿನ್ ಕುಂಞ, ರಾಧಾಕೃಷ್ಣ ಭಟ್, ಉಮ್ಮರ್ ಬೋರ್ಕಳ, ಆಶಾಲತಾ, ಪದ್ಮಾವತಿ, ಇಬ್ರಾಹಿಂ, ಅಬ್ದುಲ್ ಮಜೀದ್ ಬಿ.ಎ, ನಾರಾಯಣ ತುಂಗ, ಜಿ.ಪಂ.ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ನೇತಾರರಾದ ಅಝೀಝ್ ಮರಿಕ್ಕೆ, ಪಿ.ಬಿ.ಅಬೂಬಕ್ಕರ್, ಮೊಹಮ್ಮದ್ ಮಜಾಲು, ಸದಾಶಿವ.ಕೆ, ದೂಮಪ್ಪ ಶೆಟ್ಟಿ ತಾಮಾರು, ಸಿದ್ದೀಕ್ ಬದಿಯಾರ್, ಜಿ.ರಾಮ್ ಭಟ್ ಮುಂತಾದವರು ಉಪಸ್ಥಿತರಿದ್ದರು. ವರ್ಕಾಡಿ ಗ್ರಾ.ಪಂ.ಅಧ್ಯಕ್ಷೆ ಭಾರತಿ ಸ್ವಾಗತಿಸಿದರು. ಪಿಎಂಜಿಎಸ್ ವೈ ಯೋಜನಾ ಅಭಿಯಂತರೆ ಶ್ರೀಮತಿ ಮಿತ್ರಾ ವರದಿ ಮಂಡಿಸಿದರು. ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ವಂದಿಸಿದರು.