ಅಗರ್ತಲಾ: ಇಲ್ಲಿನ ಅಂತರರಾಷ್ಟ್ರೀಯ ಗಡಿಯ ಮೂಲಕ ಅಕ್ರಮವಾಗಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಒಟ್ಟು 744 ನುಸುಳುಕೋರರನ್ನು ಬಿಎಸ್‌ಎಫ್ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗರ್ತಲಾ: ಇಲ್ಲಿನ ಅಂತರರಾಷ್ಟ್ರೀಯ ಗಡಿಯ ಮೂಲಕ ಅಕ್ರಮವಾಗಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಒಟ್ಟು 744 ನುಸುಳುಕೋರರನ್ನು ಬಿಎಸ್‌ಎಫ್ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'744 ನುಸುಳುಕೋರರಲ್ಲಿ 112 ರೋಹಿಂಗ್ಯಾಗಳು, 337 ಬಾಂಗ್ಲಾದೇಶಿಗಳು ಮತ್ತು 295 ಭಾರತೀಯರಿದ್ದಾರೆ.
'ನುಸುಳುಕೋರರ ಬಂಧನದ ವೇಳೆ ನಿಷೇಧಿತ ಕೆಮ್ಮು ಸಿರಪ್, ಗಾಂಜಾ, ಯಾಬಾ ಮಾತ್ರೆಗಳು, ಬ್ರೌನ್ ಶುಗರ್, 4 ಕೆ.ಜಿ ಚಿನ್ನ ಸೇರಿದಂತೆ ಒಟ್ಟು ₹41.82 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ' ಎಂದರು.
'ಪ್ರತಿಕೂಲ ಹವಾಮಾನದ ನಡುವೆಯು ಗಡಿಯಾಚೆಗಿನ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಭದ್ರತಾ ಪಡೆಗಳು ಅಂತರರಾಷ್ಟ್ರೀಯ ಗಡಿಗಳಲ್ಲಿ ಸನ್ನದ್ಧವಾಗಿವೆ' ಎಂದರು.
ತ್ರಿಪುರಾ ಬಾಂಗ್ಲಾದೇಶದೊಂದಿಗೆ 856 ಕಿ.ಮೀ ಅಂತರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದ್ದು, ದೇಶದ ಗಡಿ ಪ್ರದೇಶಗಳಲ್ಲಿ 2022ರಲ್ಲಿ 369 ಮತ್ತು 2021ರಲ್ಲಿ 208 ನುಸುಳುಕೋರರನ್ನು ಬಿಎಸ್‌ಎಫ್ ಬಂಧಿಸಿತ್ತು.