ಹೈದರಾಬಾದ್ : ಅರವತ್ತು ಎಪ್ಪತ್ತು ದಾಟಿದ ನಂತರ ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವವರೇ ಹೆಚ್ಚು. ಇದು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ಚಿತ್ರಣ. ಆದರೆ ವಯಸ್ಸು ಕಲಿಕೆಗೆ ಸವಾಲು ಹಾಕಲಾರದು ಎಂಬುದನ್ನು ತೆಲಂಗಾಣದ ಮಿರ್ಯಾಲಗುಡ ಮೂಲದ ಮುಹಮ್ಮದ್ ಇಸ್ಮಾಯಿಲ್ ಸಾಬೀತುಪಡಿಸಿದ್ದಾರೆ.

76ನೇ ವಯಸ್ಸಿನಲ್ಲಿ ಹಿಂದಿಯಲ್ಲಿ ಪಿಎಚ್‌ಡಿ ಪದವಿ ಪಡೆದು ಮುಹಮ್ಮದ್ ಇಸ್ಮಾಯಿಲ್ ಸುದ್ದಿಯಲ್ಲಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಮುಗಿಸಿರುವ ಇಸ್ಮಾಯಿಲ್ ಅವರ ಪದವಿ ಪ್ರದಾನ ಸಮಾರಂಭ ಇತ್ತೀಚಿಗೆ ನಡೆಯಿತು. ಪದವಿ ಪಡೆದ ನಂತರ ಮಾತನಾಡಿದ ಮುಹಮ್ಮದ್ ಇಸ್ಮಾಯಿಲ್ ಅವರು ಉನ್ನತ ಶಿಕ್ಷಣದ ಬಗ್ಗೆ ಆಸಕ್ತಿ ಇಲ್ಲದ ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು.
"ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಾಬೀತುಪಡಿಸುವುದು ಮುಖ್ಯ ಉದ್ದೇಶವಾಗಿತ್ತು. 2018 ರಲ್ಲಿ, ಡಾ. ಬಿ.ಆರ್.ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಪಿಎಚ್‌ಡಿಗಾಗಿ ಸಂಶೋಧನೆಯನ್ನು ಪ್ರಾರಂಭಿಸಿದ ಇಸ್ಮಾಯಿಲ್ ಅವರು, ಯಶಸ್ವಿಯಾಗಿ ಪೂರ್ಣಗೊಳಿಸಿದರು. ತಮ್ಮ ಪಿಎಚ್ ಡಿ ಪದವಿ ಮೂಲಕ ಸಾಕಷ್ಟು ಜ್ಞಾನವನ್ನೂ ಗಳಿಸಲು ಸಾಧ್ಯವಾಯಿತು ಎಂದು ಅವರು ಸಂತಸ ಹಂಚಿಕೊಂಡರು.
ಇಸ್ಮಾಯಿಲ್ 1984ರಲ್ಲಿ ಪದವಿ ಪಡೆದು ಎಂಫಿಲ್ ಮುಗಿಸಿದರು. ಇಸ್ಮಾಯಿಲ್ ಅವರೊಂದಿಗೆ ಸಂಶೋಧನೆ ಪೂರ್ಣಗೊಳಿಸಿದ 20 ಜನರಲ್ಲಿ ಗೃಹಿಣಿಯರು, ಜೈಲು ಕೈದಿಗಳು ಮತ್ತು ಆಟೋ ಚಾಲಕರು ಸೇರಿದ್ದಾರೆ. ಇದು ದೇಶದ ಮೊದಲ ಮುಕ್ತ ವಿಶ್ವವಿದ್ಯಾನಿಲಯವಾದ ಡಾ. ಬಿ.ಆರ್.ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ವೈವಿಧ್ಯತೆಯನ್ನು ತೋರಿಸುತ್ತದೆ ಎಂದು ಯುಜಿಸಿ ಅಧ್ಯಕ್ಷ ಪ್ರೊ.ಎಂ.ಜಗದೀಶ್ ಕುಮಾರ್ ಹೇಳಿದ್ದಾರೆ.