ಪತ್ತನಂತಿಟ್ಟ: ಶಬರಿಮಲೆ ಮಕರವಿಳಕ್ ಮಹೋತ್ಸವಕ್ಕೆ ಸಂಬಂಧಿಸಿದಂತೆ 800 ಕೆಎಸ್‍ಆರ್‍ಟಿಸಿ ಬಸ್‍ಗಳು ಕಾರ್ಯನಿರ್ವಹಿಸಲಿವೆ. ಈ ಬಗ್ಗೆ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪಂಬಾ ಶ್ರೀರಾಮ ಸಾಕೇತಂ ಸಭಾಂಗಣದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ನಿನ್ನೆ ನಡೆದ ಸಭೆಯಲ್ಲಿ ಗಣೇಶ್‍ಕುಮಾರ್ ಮಾತನಾಡಿದರು.
ಬಸ್ ಹತ್ತಲು ನಾಲ್ಕು ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗುವುದು. ಪಂಬಾದಲ್ಲಿ ಅದೇ ಮಾದರಿಯಲ್ಲಿ ಬ್ಯಾರಿಕೇಡ್‍ಗಳು ಇರುತ್ತವೆ.
ಪಂಪಾದಿಂದ ಹೊರಡುವ ದೂರದೂರಿನ ಬಸ್‍ಗಳಲ್ಲಿ ಜನ ತುಂಬಿದ್ದರೆ ಬಸ್ ನಿಲ್ದಾಣ ಪ್ರವೇಶಿಸಬೇಕಿಲ್ಲ. ಬಸ್ ತುಂಬದಿದ್ದರೆ ಬಸ್ ನಿಲ್ದಾಣದಲ್ಲಿಯೇ ನಿಲುಗಡೆಗೊಳಿಸಬೇಕು. ನಿಲ್ಲಲು ಹೋಗುವ ಭಕ್ತರು ಆದಷ್ಟು ಸರಪಳಿ ಸೇವೆಯನ್ನು ಪಡೆದುಕೊಳ್ಳಬೇಕು.ಜನರಿಗೆ ತಿಳಿಸಲು ವಿವಿಧ ಭಾಷೆಗಳಲ್ಲಿ ಬೋರ್ಡ್‍ಗಳನ್ನು ಹಾಕಲಾಗುವುದು. ಜೊತೆಗೆ ಉದ್ಘೋಷವೂ ಇರಲಿದೆ.
ಈಗಿರುವ ರಸ್ತೆಗಳಲ್ಲಿನ ಗುಂಡಿಗಳನ್ನು ದೇವಸ್ವಂ ಮಂಡಳಿ ತುರ್ತಾಗಿ ದುರಸ್ಥಿಗೊಳಿಸಬೇಕು. ಎರುಮೇಲಿ ಮತ್ತು ಪತ್ತನಂತಿಟ್ಟದಿಂದ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ದೀರ್ಘಹೊತ್ತು ತಡೆಹಿಡಿಯಬಾರದು. ಬಸ್ ಬಂದರೆ ಮಾತ್ರ ದಟ್ಟಣೆ ನಿಯಂತ್ರಿಸಬಹುದು. ಇಂತಹ ಸಂದರ್ಭದಲ್ಲಿ ಪೆÇಲೀಸರು ಮೋಟಾರು ವಾಹನ ಇಲಾಖೆಯ ನೆರವಿನಿಂದ ವಾಹನ ಹೊರಡಲು ಅನುಕೂಲ ಮಾಡಿಕೊಡಬೇಕು. ಕೆಎಸ್‍ಆರ್‍ಟಿಸಿ ಚಾಲಕರು ಮತ್ತು ದೂರದ ಪ್ರಯಾಣದ ಬಸ್ ಡೈವರ್‍ಗಳಿಗೆ ವಿಶ್ರಾಂತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಚಿವ ಗಣೇಶ್ ಕುಮಾರ್ ಹೇಳಿರುವರು.