ಉಪ್ಪಳ: ಕಯ್ಯಾರ್ ಡೋನ್ ಬೋಸ್ಕೊ ಎ.ಯು.ಪಿ. ಶಾಲಾ 88 ನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ವಾರ್ಷಿಕೋತ್ಸವದಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾದರ್ ಆಂಟನಿ ಎಂ. ಶೆರಾ ಅಧ್ಯಕ್ಷತೆ ವಹಿಸಿದ್ದರು .ಪೈವಳಿಕೆ ಪಂಚಾಯತಿ ಅಧ್ಯಕ್ಷೆ ಜಯಂತಿ ಕೆ., ಸದಸ್ಯ ಅವಿನಾಶ್ ಮಚಾದೊ, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಎಂ.ಎಸ್, ಕಯ್ಯಾರ್ ಕ್ರಿಸ್ತರಾಜ ಇಗರ್ಜಿಯ ಧರ್ಮಗುರು ಹಾಗೂ ಶಾಲಾ ಸಂಚಾಲಕ ಫಾದರ್ ವಿಶಾಲ್ ಮೊನಿಸ್, ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಝೀನಾ ಡಿ ಸೋಜ, ಮುಖ್ಯೋಪಾಧ್ಯಾಯ ಪೀಟರ್ ರೊಡ್ರಿಗಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಝುಲ್ಫಿಕರ್ ಅಲಿ, ಮಾತೆಯರ ಸಂಘದ ಅಧ್ಯಕ್ಷ ರೇಶ್ಮಾ ಡಿ ಸೋಜ,ಶಾಲಾ ನಾಯಕ ಲಿತೇಶ್ ಕುಮಾರ್ ಬಿ. ಆರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ ರೈ ಉಪಸ್ಥಿತರಿದ್ದರು. ಶಾಲೆಯ ಅಭಿವೃದ್ಧಿಗೆ ದಾನ ನೀಡಿದವರನ್ನು ಅತಿಥಿಗಳು ಗೌರವಿಸಿದರು.
ಮಂಜೇಶ್ವರ ಉಪಜಿಲ್ಲಾ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಫಾದರ್ ಆಂಟನಿ ಎಂ.ಶೆರಾ ಗೌರವಿಸಿದರು. ಶಾಲಾ ಮುಖ್ಯೋಪಾಧ್ಯಾಯ ಪೀಟರ್ ರೋಡ್ರಿಗಸ್ ವರದಿ ವಾಚಿಸಿದರು. ಶಾಲಾ ಸಂಚಾಲಕ ಫಾದರ್ ವಿಶಾಲ್ ಮೊನಿಸ್ ಸ್ವಾಗತಿಸಿ, ಮಾಗ್ದಲೆನ್ ಟೀಚರ್ ವಂದಿಸಿದರು. ಸಿಸ್ಟರ್ ಜಾಸ್ಮಿನ್ ಹಾಗೂ ನಿರ್ಮಲ ಕಾರ್ಯಕ್ರಮ ನಿರೂಪಣೆ ಮಾಡಿದರು
ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ನಡೆದ ಸಮಾರಂಭದಲ್ಲಿ ಕಲೋತ್ಸವ , ಕ್ರೀಡೋತ್ಸವ, ವಿಜ್ಞಾನೋತ್ಸವ ಹಾಗೂ ಕಲಿಕೆಯಲ್ಲಿ ಸಾಧನೆಗೈದ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮ ನಡಯಿತು. ಶಾಲಾ ಸಂಚಾಲಕ ಫಾದರ್ ವಿಶಾಲ್ ಮೋನಿಸ್ ಅಧ್ಯಕ್ಷ ವಹಿಸಿದ್ದರು. ಪಂಚಾಯತಿ ಸದಸ್ಯರಾದ ಅವಿನಾಶ್ ಮಚಾದೊ, ರಾಜೀವಿ ಶೆಟ್ಟಿಗಾರ್, ಅಶೋಕ್ ಶೆಟ್ಟಿ, ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ.ಸೋಜ, ಕಾರ್ಯದರ್ಶಿ ಝೀನಾ ಡಿ ಸೋಜ, ಮಾತೆಯರ ಸಂಘದ ಅಧ್ಯಕ್ಷೆ ರೇಶ್ಮಾ ಡಿ ಸೋಜ, ಹಿರಿಯ ಶಿಕ್ಷಕಿ ಮಾಗ್ದಲೆನ್ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.