ಪೆರ್ಲ: ಪೆರ್ಲ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್(ರಿ)ಪುತ್ತೂರು ಹಾಗೂ ಕಾಟುಕುಕ್ಕೆ ಶ್ರೀ ಪುರಂದರದಾಸ ಆರಾಧನಾ ಸಮಿತಿ ವತಿಯಿಂದ 16ನೇ ವರ್ಷದ ಪುರಂದರ ದಾಸ ಆರಾಧನೋತ್ಸವ ಅಂಗವಾಗಿ ಭಜಕರ ಸಹಯೋಗದೊಂದಿಗೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರಿಗೆ ಮಹಾ ಶತರುದ್ರಾಭಿಷೇಕ ಮತ್ತು ಸಾವಿರ ಸರ್ವ ಸೇವೆ ಕಾರ್ಯಕ್ರಮ ಫೆ. 8ರಿಂದ 10ರ ವರೆಗೆ ಕಾಟುಕುಕ್ಕೆ ಶ್ರೀ ಸುಬ್ರಾಯದೇವಸ್ಥಾನದಲ್ಲಿ ಜರುಗಲಿದೆ.
ಪರಮಪೂಜ್ಯ ಗೋಕರ್ಣ ಮಂಡಲಾಧೀಶ್ವರ ಶ್ರಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿ ಹಾಗೂ ಸ್ವರ್ಣ ಭಿಕ್ಷಾ ಸೇವೆಯೊಂದಿಗೆ, ಮಧ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಅವರ ದಾಸ ಸಂಕೀರ್ತನಾ ಯಾನದ ಸಾವಿರದ ಸಂಕೀರ್ತನಾ ಸಮರ್ಪಣೆಯೊಂದಿಗೆ ಕಾರ್ಯಕ್ರಮ ನೆರವೇರಲಿದೆ.
ಫೆ. 8ರಂದು ಬೆಳಗ್ಗೆ ಪುತ್ತೂರು ಹಾಗೂ ಬದಿಯಡ್ಕ ಭಾಗದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಕಾಟುಕುಕ್ಕೆ ಶ್ರೀ ಸಉಬ್ರಾಯದೇವಸ್ಥಾನಕ್ಕೆ ಆಗಮಿಸುವುದು. ಸಂಜೆ 4ಕ್ಕೆ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಆಗಮನ, ಧೂಳೀಪಾದಪೂಜೆ, ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯುವುದು.
9ರಂದು ಬೆಳಗ್ಗೆ 6ಕ್ಕೆ ಗಣಪತಿ ಹೋಮ, ಭಜನಾಸಂಕೀರ್ತನೆ, 6.30ಕ್ಕೆ ಶ್ರೀದೇವರಿಗೆ ಮಹಾ ಶತರುದ್ರಾಭಿಷೇಕ ಮತ್ತು ಸಾವಿರ ಸರ್ವ ಸೇವೆ, 10ಕ್ಕೆ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಭಜನಾಮಂಡಳಿ ಸದಸ್ಯ ಭಜನಾಮಂಡಳಿಯಿಂದ ಸ್ವರ್ಣಭಿಕ್ಷಾ ಸೇವೆ ನಡೆಯುವುದು. ಮಧ್ಯಾಹ್ನ 1ಗಂಟೆಗೆ ಸಾವಿರದ ಭಜನಾ ಸಂಕೀರ್ತನೆಯ ಸಮರ್ಪಣೆ, ಸಂಜೆ 6ಕ್ಕೆ ಅಷ್ಟಾವಧಾನ ಸೇವೆ ನಡೆಯುವುದು.
10ರಂದು ಬೆಳಗ್ಗೆ 10ಕ್ಕೆ ಶ್ರೀಪೂಜೆ, ಸ್ವರ್ಣ ಭಿಕ್ಷಾ ಸೇವೆ, ಮಧ್ಯಾಹ್ನ 1ಗಂಟೆಗೆ ಶ್ರಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಂದ ಆಶೀರ್ವಚನ, ಸಂಜೆ 6ಕ್ಕೆ ಅಷ್ಟಾವಧಾನ ಸೇವೆ ನೆಡಯುವುದು.