ಅಹಮದಾಬಾದ್: 'ವೈಬ್ರಂಟ್ ಗುಜರಾತ್' ಜಾಗತಿಕ ಶೃಂಗಸಭೆಗೆ ಆಗಮಿಸಲಿರುವ ಯುಎಇ ಅಧ್ಯಕ್ಷ ಶೇಖ್ ಮೊಹಮದ್ ಬಿನ್ ಜಯೇದ್ ಅಲ್ ನಹ್ಯಾನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ವಿಮಾನನಿಲ್ದಾಣದಿಂದ ರೋಡ್ ಶೋ ನಡೆಸಲಿದ್ದಾರೆ.

ಪ್ರಧಾನಿ ಮೋದಿ ಸಂಜೆ ಯುಎಇ ಅಧ್ಯಕ್ಷರನ್ನು ಸ್ವಾಗತಿಸುವರು. ಬಳಿಕ, ಅಹಮದಾಬಾದ್ ಮತ್ತು ಗಾಂಧಿನಗರ ನಗರಕ್ಕೆ ಸಂಪರ್ಕ ಕಲ್ಪಿಸುವ ಇಂಡಿಯಾ ಬ್ರಿಡ್ಜ್‌ವರೆಗೂ, ಸುಮಾರು 3 ಕಿ.ಮೀ ದೂರ ರೋಡ್ ಶೋ ನಡೆಯಲಿದೆ ಎಂದು ಅಹಮದಾಬಾದ್ ನಗರದ ಸಂಚಾರ ವಿಭಾಗದ ಡಿಸಿಪಿ ಸಫಿನ್ ಹಸನ್ ಅವರು ತಿಳಿಸಿದ್ದಾರೆ.
ಇದಕ್ಕಾಗಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದೂ ತಿಳಿಸಿದರು. 10ನೇ ಆವೃತ್ತಿಯ ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗಸಭೆಯು ಇಲ್ಲಿನ ಮಹಾತ್ಮಮಂದಿರ ಸಮಾವೇಶ ಕೇಂದ್ರದಲ್ಲಿ ಬುಧವಾರ ಆರಂಭವಾಗಲಿದೆ.
ಜನವರಿ 8 ರಿಂದ 3 ದಿನ ಪ್ರಧಾನಿ ಗುಜರಾತ್ ಪ್ರವಾಸ ಕೈಗೊಂಡಿದ್ದು, ಶೃಂಗಸಭೆ ವೇಳೆ ವಿಶ್ವದ ವಿವಿಧ ನಾಯಕರು, ಪ್ರಮುಖ ಜಾಗತಿಕ ಕಂಪನಿಗಳ ಸಿಇಒಗಳ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸುವರು.