ತಿರುವನಂತಪುರಂ: ಕ್ರಿಸ್‍ಮಸ್-ಹೊಸ ವರ್ಷದ ಮದ್ಯ ಮಾರಾಟದಲ್ಲಿ ಕೇರಳದಲ್ಲಿ ಈ ಬಾರಿಯೂ ದಾಖಲೆಯಾಗಿದೆ. ಒಟ್ಟು 543 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ.
ಮೊನ್ನೆ (ಡಿ.31) 94.5 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸಿವೆ. ಡಿಸೆಂಬರ್ 22 ರಿಂದ 31 ರವರೆಗೆ 543.13 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ.
ಕಳೆದ ವರ್ಷ 516.26 ಕೋಟಿ ಮಾರಾಟವಾಗಿತ್ತು. ಈ ಬಾರಿ ಡಿಸೆಂಬರ್ 31ರಂದು ಕೂಡ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ ನಡೆದಿದೆ. ಮಲಯಾಳಿಗಳ ಹೊಸ ವರ್ಷಾಚರಣೆಯ ಅಂಗವಾಗಿ 94.54 ಕೋಟಿ ರೂ.ಮೌಲ್ಯದ ಮದ್ಯ ಸೇವಿಸಿ ವರ್ಷವೊಂದನ್ನು ಮರೆತಿದ್ದಾರೆ. ಕಳೆದ ವರ್ಷ 93.33 ಕೋಟಿ ರೂ.ಮಾರಾಟವಾಗಿತ್ತು. ಡಿಸೆಂಬರ್ 30 ರಂದು ರಾಜ್ಯದಲ್ಲಿ 61.91 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಡಿಸೆಂಬರ್ 30, 2022 ರಂದು 55.04 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ.
ಡಿಸೆಂಬರ್ 31ರಂದು ತಿರುವನಂತಪುರದ ಪವರ್ ಹೌಸ್ ರಸ್ತೆಯಲ್ಲಿರುವ ಔಟ್ ಲೆಟ್ ನಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಇಲ್ಲಿ 1.02 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಎರ್ನಾಕುಳಂ ರವಿಪುರಂ 77 ಲಕ್ಷ, ಇರಿಂಞಲಕುಡ 76 ಲಕ್ಷ, ಕೊಲ್ಲಂ ಆಶ್ರಮ 73 ಲಕ್ಷ ಮತ್ತು ಪಯ್ಯನ್ನೂರು 71 ಲಕ್ಷ ಗಳಂತೆ ಮದ್ಯ ಮಾರಾಟವಾಗಿದೆ.