ವಡೋದರಾ: ಗುಜರಾತ್‌ನ ವಡೋದರಾದ ಹರಿಣಿ ಕೆರೆಯಲ್ಲಿ ಬೋಟ್ ಮಗುಚಿ ಪ್ರವಾಸಕ್ಕೆ ಬಂದಿದ್ದ 9 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ವಡೋದರಾ: ಗುಜರಾತ್‌ನ ವಡೋದರಾದ ಹರಿಣಿ ಕೆರೆಯಲ್ಲಿ ಬೋಟ್ ಮಗುಚಿ ಪ್ರವಾಸಕ್ಕೆ ಬಂದಿದ್ದ 9 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಬೋಟ್ ಕೇವಲ 15 ಜನರ ಸಾಮರ್ಥ್ಯದ್ದಾಗಿತ್ತು, ಆದರೆ ಬೋಟ್‌ನಲ್ಲಿ 27 ಜನರನ್ನು ಕರೆದೊಯ್ಯಲಾಗಿತ್ತು. ಇದರಿಂದಾಗಿ ಬೋಟ್ ಮಗುಚಿದೆ. ಅಲ್ಲದೆ ವಿದ್ಯಾರ್ಥಿಗಳಿಗಾಗಲೀ, ಶಿಕ್ಷಕರಿಗಾಗಲೀ ಲೈಫ್ ಜಾಕೆಟ್ ಅನ್ನು ನೀಡಿರಲಿಲ್ಲ ಎಂದು ತಿಳಿದುಬಂದಿದೆ.
ಸದ್ಯ ಕೇಂದ್ರ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಗುರುತಿನ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂತಾಪ ವ್ಯಕ್ತಪಡಿಸಿದ್ದಾರೆ.