HEALTH TIPS

ಮುಂಬೈನ Apple BKC ಸನಿಹವೇ SAMSUNG ಹೊಸ ಸ್ಟೋರ್! ಹೊರದೇಶದಲ್ಲಿ ಇದೇ ಮೊದಲು

            ಮುಂಬೈ: ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್‌ಸಂಗ್ ಕಂಪನಿ ಇದೇ ಮೊದಲ ಬಾರಿಗೆ ತನ್ನ ತವರಾದ ದಕ್ಷಿಣ ಕೊರಿಯಾದಿಂದ ಹೊರಗಡೆ ಸ್ವಂತ ಅತ್ಯಾಧುನಿಕ ಸ್ಟೋರ್‌ ಅನ್ನು (SAMSUNG BKC) ಮುಂಬೈನಲ್ಲಿ ತೆರೆದಿದೆ.

                 ಕಳೆದ ಮಂಗಳವಾರ ಇದು ಲೋಕಾರ್ಪಣೆಗೊಂಡಿದೆ.

                  ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ (BKC) ಪ್ರದೇಶದ ಜಿಯೊ ವರ್ಲ್ಡ್ ಮಾಲ್‌ನಲ್ಲಿ ಸುಮಾರು 8 ಸಾವಿರ ಚದರ ಅಡಿ ಪ್ರದೇಶದಲ್ಲಿ ಸ್ಯಾಮ್‌ಸಂಗ್‌ನ ಈ ಸ್ಟೋರ್ ತಲೆ ಎತ್ತಿದೆ.

ವಿಶೇಷವೆಂದರೆ ಬಿಕೆಸಿಯಲ್ಲಿ ಇತ್ತೀಚೆಗೆ ತೆರೆದಿರುವ ಆಯಪಲ್ ಸ್ಟೋರ್ ಸನಿಹವೇ ಸ್ಯಾಮ್‌ಸಂಗ್ ಸ್ಟೋರ್ ತೆರೆದಿದೆ.

                  ಸ್ಯಾಮ್‌ಸಂಗ್ ಉತ್ಪನ್ನಗಳ ಪರಿಚಯ, ಖರೀದಿ ಸೇರಿದಂತೆ O2O ಸೌಲಭ್ಯ (Online, offline) ಇದರಲ್ಲಿ ಇದ್ದು, ಬಹುತೇಕ ಸ್ಯಾಮ್‌ಸಂಗ್‌ನ ಕೃತಕ ಬುದ್ಧಿಮತ್ತೆ ಆಧರಿಸಿ ಇದು ಕಾರ್ಯನಿರ್ವಹಿಸಲಿದೆ. ಗ್ರಾಹಕರಿಗೆ ಅತ್ಯಾಧುನಿಕ, ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸ್ಟೋರ್‌ನ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

            'ಭಾರತೀಯ ಗ್ರಾಹಕರಿಗೆ ಬಿಕೆಸಿಯ ನಮ್ಮ ಹೊಸ ಸ್ಟೋರ್ ಜಾಗತಿಕ ಗುಣಮಟ್ಟದ ಹೊಸ ಅನುಭವವನ್ನು ನೀಡಲಿದೆ' ಎಂದು ತಿಳಿಸಿದ್ದಾರೆ.

               'ಈ ಸ್ಟೋರ್‌ನಲ್ಲಿ ಹೊಸದಾಗಿ kinetic video wall ಹಾಕಲಾಗಿದ್ದು ಇದು ಇಡೀ ಭಾರತದಲ್ಲೇ ಅತಿ ದೊಡ್ಡ ವಿಡಿಯೊ ವಾಲ್' ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries