HEALTH TIPS

ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು

           ಜಿನೆವಾ: ವಾತಾವರಣದ ಮೇಲೆ ಪ್ರಭಾವ ಭೀರುತ್ತಿರುವ ಎಲ್‌ ನಿನೊ ಸದ್ಯ ಪ್ರಗತಿಯಲ್ಲಿದ್ದು, ಇದು ಏಪ್ರಿಲ್‌ವರೆಗೂ ಮುಂದುವರಿಯಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆ (WMO) ಹೇಳಿದೆ.

               ಪೆಸಿಫಿಕ್ ಸಾಗರದ ಪೂರ್ವ ಹಾಗೂ ಕೇಂದ್ರ ಭಾಗದ ಮೇಲ್ಮೈನ ತಾಪಮಾನ ಏರಿಕೆಯಾಗುವುದರಿಂದ ಎಲ್‌ ನಿನೊ ಕಂಡುಬಂದಿದೆ.

               ಇದರಿಂದ ತಾಪಮಾನ ವಿಪರೀತ ಹೆಚ್ಚಳವಾಗಿ ಜಾಗತಿಕ ಮಟ್ಟದಲ್ಲಿ ಕಾಳ್ಗಿಚ್ಚು, ಚಂಡಮಾರುತ ಮತ್ತು ಬರದ ಪರಿಸ್ಥಿತಿ ಮುಂದುವರಿಯಲಿದೆ. ಈಗಾಗಲೇ ಇಂಥ ಘಟನೆಗಳು ಜಗತ್ತಿನ ವಿವಿಧ ಬಾಗಗಳಲ್ಲಿ ಕಂಡುಬಂದಿದೆ. ಇದರಿಂದಾಗಿ ಆಹಾರ ಮತ್ತು ಇಂಧನ ಬೇಡಿಕೆ ಮತ್ತು ಬೆಲೆ ಹೆಚ್ಚಳವಾಗಲಿದೆ

               ನೈಸರ್ಗಿಕವಾಗಿ ಸಂಭವಿಸುವ ಘಟನೆಗಳು ಉತ್ತರ ಗೋಳಾರ್ಧದಲ್ಲಿ ಮುಂದುವರಿಯಲಿದೆ. ಅಮೆರಿಕ ಸರ್ಕಾರದ ಹವಾಮಾನ ಇಲಾಖೆ ಹೇಳಿದಂತೆ ಶೇ 90ರಷ್ಟು ಮುನ್ಸೂಚನೆ ಇರಲಿದೆ. 2026ರಲ್ಲೂ ಇಂಥದ್ದೇ ಪರಿಸ್ಥಿತಿ ಇತ್ತು. ಪಳಿಯುಳಿಕೆ ಇಂಧನಗಳನ್ನು ಹೆಚ್ಚಾಗಿ ಸುಡುವುದೂ ಸಹ ಎಲ್‌ ನಿನೊ ಹಾಗೂ ತಾಪಮಾನ ಹೆಚ್ಚಳಕ್ಕೆ ಕಾರಣವಾಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries