ಕಾಸರಗೋಡು: ಕೃಷಿ ಇಲಾಖೆಯಿಂದ ನಿವೃತ್ತಿ ಹೊಂದಿದ ರಮೇಶ್ ಎಸ್.ಎಂ. ಅವರಿಗೆ ರಮೇಶ್ ಅಭಿಮಾನಿ ಬಳಗ ಕಾಸರಗೋಡು ಇದರ ನೇತೃತ್ವದಲ್ಲಿ ಗೌರವಾರ್ಪಣಾ ಕಾರ್ಯಕ್ರಮ ಇತ್ತೀಚೆಗೆ ಕಾಸರಗೋಡಿನಲ್ಲಿ ಜರಗಿತು.
ರಮೇಶ್ ನಾಯ್ಕ್ ಅವರು ತಿರುವನಂತಪುರದಲ್ಲಿ ಕರ್ತವ್ಯದಲ್ಲಿದ್ದ ಕೃಷಿಇಲಾಖೆಯ ಸೂಪರಿಡೆಂಡೆಂಟ್ ಮೂಲತಃ ಬದಿಯಡ್ಕ ಕರಿಂಬಿಲ ನಿವಾಸಿ ಪ್ರಸ್ತುತ ಕಾಸರಗೋಡು ಕೂಡ್ಲು ಎಂಬಲ್ಲಿ ವಾಸವಾಗಿದ್ದಾರೆ. ಕಾರ್ಯಕ್ರಮದಲ್ಲಿ ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಜನಾರ್ದನ ನಾಯ್ಕ್ ಸಿ.ಎಚ್. ಅಧ್ಯಕ್ಷತೆ ವಹಿಸಿದ್ದರು. ಜನರಲ್ ಆಸ್ಪತ್ರೆಯ ಡೆಪ್ಯೂಟಿ ಸೂಪರಿಡೆಂಡೆಂಟ್ ಡಾ. ಜಮಾಲ್ ಅಹಮ್ಮದ್ ಗೌರವಿಸಿದರು. ನಿವೃತ್ತ ಮಕ್ಕಳ ತಜ್ಞ ಡಾ. ನಾರಾಯಣ ನಾಯ್ಕ್, ನಿವೃತ್ತ ತಹಶೀಲ್ದಾರ್ ಚನಿಯಪ್ಪ ನಾಯ್ಕ್, ಡಾ. ಸುನಿಲ್ ಚಂದ್ರನ್, ಲೆ.ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್, ನರ್ಸಿಂಗ್ ಸುಪರಿಡೆಂಡೆಂಟ್ ಮಿನಿ ಮ್ಯಾಥ್ಯೂ, ನರ್ಸಿಂಗ್ ಸಹಾಯಕ ನಾರಾಯಣ ಬಾರಡ್ಕ, ಕಾಸರಗೋಡು ಪಬ್ಲಿಕ್ ಸರ್ವೆಂಟ್ ಸೊಸೈಟಿ ಅಧ್ಯಕ್ಷ ರಮೇಶನ್ ಕೆ.ವಿ., ಸಿಬ್ಬಂದಿ ಸುಬ್ರಹ್ಮಣ್ಯನ್, ಕಿಶೋರ್ ಕುಮಾರ್ ಮಂಗಲ್ಪಾಡಿ, ನಯನ ನಲ್ಕ, ಭುವನೇಶ್ವರಿ ಶುಭಹಾರೈಸಿದರು. ರಮೇಶ್ ನಾಯ್ಕ್ ದಿವಾಮಣಿ ದಂಪತಿಯರು ಗೌರವಾರ್ಪಣೆಗೆ ಕೃತಜ್ಞತೆ ಸಲ್ಲಿಸಿದರು.