ಕೋಝಿಕ್ಕೋಡ್: ಕೆ.ಎಸ್.ಆರ್.ಟಿ.ಸಿ-ಸ್ವಿಪ್ಟ್ ಎಂ.ಡಿ.(ಆಡಳಿತಾಧಿಕಾರಿ) ಬಿಜು ಪ್ರಭಾಕರ್ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ನಿರ್ಗಮಿಸುತ್ತಿರುವುದಾಗಿ ಅವರು ವಿವರಣೆ ನೀಡಿರುವರು.
ಬಿಜು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಕೆಎಸ್‍ಆರ್‍ಟಿಸಿ ಬಗ್ಗೆ ಸಾಕಷ್ಟು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದು ಹುದ್ದೆಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದರು.
ಸಾರಿಗೆ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಬಿಜು ಪ್ರಭಾಕರ್ ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಆದರೆ, ನೂತನ ಸಾರಿಗೆ ಸಚಿವರ ಆಗಮನ ಹಾಗೂ ಸಚಿವ ಗಣೇಶ್ ಕುಮಾರ್ ಅವರ ನಿರ್ಧಾರ ಹಾಗೂ ಕ್ರಮಗಳಿಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲಾಗಿದೆ ಎಂಬ ವ್ಯಾಖ್ಯಾನಗಳೂ ಇವೆ.
ವಿಧಾನಸಭೆ ಕಲಾಪ ನಡೆಯುತ್ತಿರುವ ಈ ಹೊತ್ತು ಬಿಕ್ಕಟ್ಟಿಗೆ ಸಿಲುಕಿರುವ ಕೆಎಸ್‍ಆರ್‍ಟಿಸಿ ವಿಚಾರ ಬಿಜು ಪ್ರಭಾಕರ್ ರಾಜೀನಾಮೆ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಲಿದೆ.