ಮಿಯಾಮಿ: ಸುಮಾರು 10 ಸಾವಿರ ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ಹಡಗು ತನ್ನ ಮೊದಲ ಪ್ರಯಾಣವನ್ನು ಮಿಯಾಮಿ ಬಂದರಿನಿಂದ ಶನಿವಾರ ಆರಂಭಿಸಿದೆ.
ಮಿಯಾಮಿ: ಸುಮಾರು 10 ಸಾವಿರ ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ಹಡಗು ತನ್ನ ಮೊದಲ ಪ್ರಯಾಣವನ್ನು ಮಿಯಾಮಿ ಬಂದರಿನಿಂದ ಶನಿವಾರ ಆರಂಭಿಸಿದೆ.
1200 ಅಡಿ ಉದ್ದದ ಈ ಹಡಗು ದಕ್ಷಿಣ ಫ್ಲಾರಿಡಾದಿಂದ ಏಳು ದಿನಗಳ ಮೊದಲ ಯಾನ ಆರಂಭಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಯಲ್ ಕೆರಿಬಿಯನ್ ಗ್ರೂಪ್ ಅಧ್ಯಕ್ಷ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಜಾಸನ್ ಲಿಬರ್ಟಿ ಅವರು, 'ವಿಶ್ವದ ಜನತೆಗೆ ಅತ್ಯುತ್ತಮವಾದ ಪಯಾಣದ ಅನುಭವಗಳನ್ನು ನೀಡಬೇಕೆಂಬುದು ಐವತ್ತಕ್ಕಿಂತ ಹೆಚ್ಚಿನ ವರ್ಷಗಳ ಕನಸಾಗಿತ್ತು' ಎಂದು ಹೇಳಿದ್ದಾರೆ.
2022ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಈ ಹಡಗನ್ನು ಪ್ರದರ್ಶಿಸಲಾಯಿತು. ಒಂದೇ ದಿನದಲ್ಲಿ ಇದರ ಅತಿ ಹೆಚ್ಚಿನ ಬುಕಿಂಗ್ ಆಯಿತು. 53 ವರ್ಷಗಳ ಇತಿಹಾಸದಲ್ಲಿ ಇದು ದಾಖಲೆಯೇ ಸರಿ ಎಂದಿದ್ದಾರೆ.
ಈ ಹಡಗಿನ ಮೇಲಿನ 20 ಡೆಕ್‌ಗಳನ್ನು ಎಂಟು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಏಳು ಈಜುಕೊಳಗಳು, ಆರು ವಾಟರ್‌ಸ್ಲೈಡ್‌ಗಳು, ಐಸ್ ಸ್ಕೇಟಿಂಗ್ ರಿಂಕ್, ಥಿಯೇಟರ್ ಮತ್ತು 40ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು, ಬಾರ್‌ಗಳು ಮತ್ತು ಲಾಂಜ್‌ಗಳನ್ನು ಒಳಗೊಂಡಿರುವ ಈ ಹಡಗು, 2350 ಸಿಬ್ಬಂದಿ ಹಾಗೂ ಗರಿಷ್ಠ 7600 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.